ಉದಯೋನ್ಮುಖ ಚಿತ್ರನಟ ವಿಶ್ವಪ್ರಕಾಶ್‌ಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ

Budding actor Vishwaprakash won the Best Actor award
ಕೊಪ್ಪಳದ ಜೆ.ಕೆ.ಎಸ್. ಹೋಟೆಲ್‌ನಲ್ಲಿ ಕವಿತಾ ಮೀಡಿಯಾ ಸೋರ್ಸ್ ಪ್ರೈ.ಲಿ., ನ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿವಾಹಿನಿ ಆಯೋಜಿಸಿದ್ದ ಕರುನಾಡು ಕಿರು ಚಿತ್ರೋತ್ಸವದಲ್ಲಿ ವಿಜಯಪುರ ಜಿಲ್ಲೆ ಉದಯೋನ್ಮುಖ ಚಲನಚಿತ್ರನಟ ವಿಶ್ವಪ್ರಕಾಶ ಟಿ. ಮಲಗೊಂಡ ಅವರಿಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಮಹಾಂತೇಶ ಮಲ್ಲನಗೌಡರ, ಪ್ರಾಧ್ಯಾಪಕ ಪ್ರೊ. ಶರಣಪ್ಪ ಬಿಳಿಯಲಿ, ಸಮಾಜ ಸೇವಕಿ ಶಾರದಾ ಪಾನಘಂಟಿ, ಅಳವಂಡಿ ಪಿಎಸ್‌ಐ ನಾಗಪ್ಪ ಕೆ, ಸಿನಿಮಾ ಪತ್ರಕರ್ತ ಬಸವರಾಜ ಕರುಗಲ್ ಇತರರಿದ್ದಾರೆ.
Published on


ವಿಜಯಪುರ : ನಗರದ ಉದಯೋನ್ಮುಖ ಚಲನಚಿತ್ರ ನಟ ವಿಶ್ವಪ್ರಕಾಶ ಟಿ. ಮಲಗೊಂಡ ಅವರಿಗೆ ಕರುನಾಡು ಕಿರು ಚಿತ್ರೋತ್ಸವದಲ್ಲಿ ಬೆಸ್ಟ್ ಆಕ್ಟರ್ ಪ್ರಶಸ್ತಿ ಲಭಿಸಿದೆ.

ಕೊಪ್ಪಳದ ಜೆ.ಕೆ.ಎಸ್. ಹೋಟೆಲ್‌ನಲ್ಲಿ ಕವಿತಾ ಮೀಡಿಯಾ ಸೋರ್ಸ್ ಪ್ರೈ.ಲಿ.,ನ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿವಾಹಿನಿ ಭಾನುವಾರ (ಜು. 21) ಆಯೋಜಿಸಿದ್ದ ಕರುನಾಡು ಕಿರು ಚಿತ್ರೋತ್ಸವದಲ್ಲಿ ವಿಶ್ವಪ್ರಕಾಶ ಪ್ರಧಾನ ಪಾತ್ರದಲ್ಲಿರುವ ‘ತುಷಾರ್’ ಚಿತ್ರವೂ ಭಾಗವಹಿಸಿತ್ತು. ಚಿತ್ರದ ನಾಯಕನ ಅಭಿನಯಕ್ಕೆ ಬೆಸ್ಟ್ ಆಕ್ಟರ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.

ಕಿರು ಚಿತ್ರೋತ್ಸವದಲ್ಲಿ ರಾಜ್ಯದ ಹಲವು ಕಿರುಚಿತ್ರಗಳು ಭಾಗವಹಿಸಿದ್ದು, ಬೆಸ್ಟ್ ಶಾರ್ಟ್ ಫಿಲಂ, ಬೆಸ್ಟ್ ಸ್ಟೋರಿ, ಬೆಸ್ಟ್ ಆಕ್ಟರ್ ಸೇರಿ ಹತ್ತು ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.

ಚಿತ್ರೋತ್ಸವದಲ್ಲಿ ಅಧ್ಯಕ್ಷ ಮಹಾಂತೇಶ ಮಲ್ಲನಗೌಡರ, ಚಿತ್ರನಟಿ ಶಿವಮ್ಮ ಯರೆಹಂಚಿನಾಳ, ಚಲನಚಿತ್ರ ನಿರ್ದೇಶಕ ಬಸವರಾಜ ಕೊಪ್ಪಳ, ಆಯೋಜಕ ಡಾ. ಬಿ.ಎ. ಹೊರಪೇಟಿ, ಪ್ರಾಧ್ಯಾಪಕ ಪ್ರೊ. ಶರಣಪ್ಪ ಬಿಳಿಯಲಿ, ಸಮಾಜ ಸೇವಕಿ ಶಾರದಾ ಪಾನಘಂಟಿ, ಅಳವಂಡಿ ಪಿಎಸ್‌ಐ ನಾಗಪ್ಪ ಕೆ., ಸಿನಿಮಾ ಪತ್ರಕರ್ತ ಬಸವರಾಜ ಕರುಗಲ್, ನಟ, ನಟಿ, ನಿರ್ದೇಶಕ, ನಿರ್ಮಾಪಕರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net