

ಮಂಡ್ಯ: ರಾಜ್ಯಮಟ್ಟದ ಬೌದ್ಧ ಸಮಾವೇಶದ ಪೂರ್ವಭಾವಿಯಾಗಿ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಆ.26ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಮಟ್ಟದ ಸಮಾಲೋಚನಾ ಸಭೆ ಆಯೋಜಿಸಲಾಗಿದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಎಂ.ಸಿ. ಶಿವರಾಜು ತಿಳಿಸಿದರು.
ಅಂದು ಬೆಳಗ್ಗೆ 10.30ಕ್ಕೆ ಸಭೆಯ ಉದ್ಘಾಟನಾ ಕಾರ್ಯಕ್ರಮವಿರಲಿದೆ. ಮಹಾಸಭಾದ ರಾಜ್ಯಾಧ್ಯಕ್ಷ ಎಂ.ಸಿ.ಶಿವರಾಜು, ರಾಷ್ಟ್ರೀಯ ಉಸ್ತುವಾರಿ ಮಲ್ಲಿಕಾರ್ಜುನ ಬಾಲ್ಕಿ, ಕೋಶಾಧಿಕಾರಿ ಅರ್ಜುನರಾವ್ ಕೇಸರಿ ಭಾಗವಹಿಸಿ ಚರ್ಚಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯಮಟ್ಟದ ಸಮಾವೇಶದ ಕುರಿತಂತೆ ಆ.9ರಂದು ಬೆಂಗಳೂರಿನ ಸ್ಪೂರ್ತಿಧಾಮ ಲೋಕಬುದ್ಧ ವಿಹಾರದಲ್ಲಿ ರಾಜ್ಯಮಟ್ಟದ ಮಹಾಸಭಾದ ಚಿಂತನ ಶಿಬಿರ ನಡೆಸಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈಗಾಗಲೇ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಅನ್ನದಾನಿ, ಪ್ರಧಾನ ಕಾರ್ಯದರ್ಶಿ ಎಸ್.ಪಿ.ನಾರಾಯಣಸ್ವಾಮಿ, ಮುಖಂಡರಾದ ಸಿದ್ದರಾಮು, ಚಂದ್ರಹಾಸ, ಜಯರಾಂ ಇದ್ದರು.