ಅ.14, 15ರಂದು ಮೈಸೂರಿನಲ್ಲಿ ಬೌದ್ಧ ಸಮ್ಮೇಳನ: ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜು ವಿವರ

Buddhist conference in Mysore Mandya
Published on

ಮಂಡ್ಯ: ರಾಜ್ಯ ಬಿಕ್ಕು ಸಂಘ, ಬೌದ್ಧ ಸಂಘ ಸಂಸ್ಥೆಗಳು ಹಾಗೂ ಅಂಬೇಡ್ಕರ್‌ವಾದಿ ಸಂಘಟನೆ ಮತ್ತು ವಿಶ್ವಮೈತ್ರಿ ಬುದ್ಧವಿಹಾರದ ಸಹಯೋಗದಲ್ಲಿ ಅ.14 ಮತ್ತು 15ರಂದು ಬೌದ್ಧ ಮಹಾಸಮ್ಮೇಳನವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ 70ನೇ ವರ್ಷದ ಹೊಸ್ತಿಲಿನಲ್ಲಿ ಆಯೋಜಿಸಿರುವ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಂಸ್ಕೃತಿಕ ಸಂಗಮದ ಮೂಲಕ ಮಾನವ ಮೈತ್ರಿಯ ಪಯಣ ನಡೆಯಲಿದೆ. ಈ ಹಿನ್ನಲೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಬೌದ್ಧ ಬಿಕ್ಕುಗಳನ್ನು ಗೌರವಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಧಾನ್ಯ, ಚಿಂತನೆ ಮತ್ತು ವಿಚಾರಗಳನ್ನೊಳಗೊಂಡ ಐತಿಹಾಸಿಕ ಸಾಮಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮೊದಲ ದಿನ ದೇಶದ ವಿವಿಧ ಭಾಗಗಗಳಿಂದ ಆಗಮಿಸುವ 200ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳಿಂದ ಬೋಧನೆ ನಡೆಯಲಿದೆ. ಇದೇ ವೇಳೆ ಸ್ವ ಇಚ್ಛೆಯಿಂದ ಧಮ್ಮ ಸ್ವೀಕಾರ ಮಾಡುವವರಿಗೆ ದೀಕ್ಷೆ ನೀಡಲಾಗುವುದು. ಎರಡನೇ ದಿನ ಮುಖ್ಯಮಂತ್ರಿ ಸೇರಿದಂತೆ ಹಲವು ಮಂತ್ರಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಒಂದು ಬೃಹತ್ ಹಾಗೂ ನಾಲ್ಕು ಸಮನಾಂತರ ವೇದಿಕೆ ರೂಪಿಸಲಾಗುವುದು. 5 ಲಕ್ಷಕ್ಕೂ ಹೆಚ್ಚು ಬೌದ್ಧ ಅನುಯಾಯಿಗಳು ಭಾಗವಹಿಸುವ ನಿರೀಕ್ಷಿಸಲಾಗಿದೆ ಎಂದರು.

ವಿವಿಧ ಸಂಘಟನೆಯ ಎಚ್.ಎನ್.ನರಸಿಂಹಮೂರ್ತಿ, ಮಹದೇವು, ಹುರುಗಲವಾಡಿ ರಾಮಯ್ಯ, ಎಸ್.ಪಿ.ನಾರಾಯಣಸ್ವಾಮಿ, ವೆಂಕಟೇಶ್, ಗುರುಮೂರ್ತಿ, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net