ಮಾ.25ರಂದು ನೇರಲಕೆರೆಯಲ್ಲಿ ಬೌದ್ಧ ಸಮ್ಮೇಳನ: ಬುದ್ಧ ಭಾರತ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ ಮಾಹಿತಿ

Buddhist Conference at Neralakere mandya
Published on

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ನೇರಲಕೆರೆ ಗ್ರಾಮದಲ್ಲಿ ಮಾ.25ರಂದು ಪ್ರಥಮ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನ ಆಯೋಜಿಸಲಾಗಿದೆ ಎಂದು ಬುದ್ಧ ಭಾರತ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ ತಿಳಿಸಿದರು.

ಗ್ರಾಮದಲ್ಲಿ ಈಗಾಗಲೇ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಯುಪಿಎಸ್‌ಸಿ, ಕೆಪಿಎಸ್‌ಸಿ, ಪೊಲೀಸ್, ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಇದಲ್ಲದೆ, ಗ್ರಂಥಾಲಯ, ಅಧ್ಯಯನ ಕೇಂದ್ರ, ವಸತಿ ನಿಲಯ, ಆಸ್ಪತ್ರೆ, ಕೌಶಲಾಭಿವೃದ್ಧಿ ಕೇಂದ್ರ ಸೇರಿದಂತೆ ಪ್ರತಿ ಮಾನವನ ಸೇವೆ ಮಾಡಬೇಕೆಂಬ ಮಹದಾಸೆಯಿಂದ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾ.25ರಂದು ಸಂಜೆ 6 ಗಂಟೆಗೆ ಗಾಯಕ ಸ್ವಾಮಿ ಗಾಮನಹಳ್ಳಿ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು, ಬುದ್ಧ ಅನುಯಾಯಿಗಳು ಆಗಮಿಸಬೇಕು. ಅಂದು ರಾಗಿಮುದ್ದೆ, ಅವರೆಕಾಳು ಕೂಟು, ಅನ್ನ ಸಾಂಬಾರ್, ಮಜ್ಜಿಗೆ, ಪಾಯಸದ ವ್ಯವಸ್ಥೆ ಮಾಡಲಾಗಿದೆ. ತಂಗಲು 500 ಜನರಿಗೆ ಸ್ಥಳಾವಕಾಶ ಮಾಡಲಾಗಿದೆ. ಮಾ.10ರಂದು ಜಿಲ್ಲಾಡಳಿತದ ವತಿಯಿಂದ ಪಂಚಶೀಲ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಫೌಂಡೇಷನ್‌ನ ಆಶಾಜ್ಯೋತಿ, ಲೋಕೇಶ್, ರವಿಗೌಡ, ಕುಮಾರ್, ಶಿವಲಿಂಗಯ್ಯ, ಗಾಮನಹಳ್ಳಿ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net