ಬುದ್ಧ ಧರ್ಮವೇ ಬಿಡುಗಡೆಯ ಮಾರ್ಗ: ಸಾಹಿತಿ ಪ್ರೊ.ರಮಹತ್ ತರೀಕೆರೆ

mysore
Published on

ಮೈಸೂರು: ರಾಜ್ಯದಲ್ಲಿ ಬುದ್ಧ ಧಮ್ಮ ಅನುಸರಿಸುವವರು ವಿವಿಧ ರೂಪದಲ್ಲಿದ್ದಾರೆ. ಧೀಕ್ಷಾ ರಹಿತ ಬೌದ್ಧರು ಅನೇಕರಿದ್ದಾರೆ ಎಂದು ಸಾಹಿತಿ ಪ್ರೊ.ರಮಹತ್ ತರೀಕೆರೆ ಹೇಳಿದರು.


ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ 68ನೇ ಧಮ್ಮದೀಕ್ಷಾ ದಿನಾಚರಣೆಯಲ್ಲಿ ‘ಕರ್ನಾಟಕದಲ್ಲಿ ನವಯಾನದ ಬೆಳವಣಿಗೆಗಳು’ ಕುರಿತು ಉಪನ್ಯಾಸ ನೀಡಿದರು.

ಪೈಗಂಬರರ ವಾನವೀಯತೆಯನ್ನು ಗಮನಿಸಿದಾಗ ಮುಸಲ್ಮಾನರು ಹಿಂದಿದ್ದಾರೆ ಎಂಬುದು ಗೋಚರವಾಗುತ್ತದೆ. ಅಂತೆಯೇ ಬುದ್ಧನ ಧಮ್ಮವನ್ನು ಅರಿತು ಅನುಸರಿಸುವಲ್ಲಿ ಉಪಾಸಕರೂ ಹಿಂದುಳಿದಿದ್ದಾರೆ. ಎಲ್ಲೆಡೆ ಹರಡಿರುವ ಧಮ್ಮವನ್ನು ಅರಿತು, ಒಂದಾಗಿ ಮುನ್ನೆಡೆಯಬೇಕಿದೆ ಎಂದರು.


ಸಂಕಷ್ಟದಲ್ಲಿರುವ ದಲಿತರು, ಮುಸ್ಲಿಂರಿಗೆ ಬುದ್ಧ ಧರ್ಮವೇ ಬಿಡುಗಡೆಯ ಮಾರ್ಗವಾಗಲಿದ್ದು, ವಿಭಿನ್ನ ಆಹಾರ, ಸಂಸ್ಕೃತಿಂು ಕಾರಣಕ್ಕಾಗಿ ದಲಿತರು, ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿರುವ ಈ ಸಂದರ್ಭದಲ್ಲಿ ಇದೊಂದು ಪರ್ಯಾಯ ದಾರಿಯಾಗಿದೆ ಎಂದು ಹೇಳಿದರು.


ಅಂಬೇಡ್ಕರ್ ನವಯಾನದ ಬುದ್ಧ್ದ ಧಮ್ಮವೂ ವಿಮೋಚನಾ ದಾರಿಯಾಗಿದೆ. ಬೌದ್ಧಿಕ ಸಿದ್ಧತೆಯೊಂದಿಗೆ ಸವಾಜವನ್ನು ಅರ್ಥೈಸಿಕೊಳ್ಳುವ ಶಕ್ತಿ ಬುದ್ಧ ಧಮ್ಮವನ್ನು ಅನುಸರಿಸುವರಿಗೆ, ಪ್ರಚಾರ ಮಾಡುವವರಿಗೆ ಅಗತ್ಯವಾಗಿ ಬೇಕಾಗಿದೆ. ಪುರುಷರು ಬೌದ್ಧ ಧಮ್ಮವನ್ನು ಪಾಲನೆ ಮಾಡುತ್ತಿದ್ದರೂ, ಸ್ತ್ರೀಯರು ಆಚರಣೆಂುಲ್ಲಿ ಸಕ್ರಿಯವಾಗಿಲ್ಲ. ರಾಜ್ಯದಲ್ಲಿ ನವಯಾನದ ಪ್ರಗತಿಗೆ ಇದು ಪ್ರಮುಖ ಅಡ್ಡಿಯಾಗಿದೆ ಎಂದು ಅಭಿಪ್ರಾಯಿಸಿದರು.


ಮಹಾಬೋಧಿ ಸೊಸೈಟಿಂು ಭಂತೇ ನೀಲು ಇಂಜಾಂಗ್, ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಗಾಂಧಿ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುವಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net