ಇಡೀ ಪ್ರಪಂಚಕ್ಕೆ ಬೆಳಕು ಚೆಲ್ಲಿದ ಬುದ್ಧ

ಮದ್ದೂರು ತಾಲೂಕಿನ ಮಾಲಗಾರನಹಳ್ಳಿಯಲ್ಲಿ ದಮ್ಮ ಚಕ್ಕ ಪವತ್ತನ ದಿನದ ಪ್ರಯುಕ್ತ ಧರ್ಮ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಗರತ್ನ ಬಂತೇಜಿ, ಸುರೇಶ್‌ಕಂಠಿ, ಸುದರ್ಶನ, ಸಿದ್ದರಾಮಯ್ಯ, ಸಿ.ಎಂ.ದ್ಯಾವಪ್ಪ, ವಿ.ಸಿ.ಉಮಾಶಂಕರ್, ಉಮೇಶ್ ಇದ್ದರು.
ಮದ್ದೂರು ತಾಲೂಕಿನ ಮಾಲಗಾರನಹಳ್ಳಿಯಲ್ಲಿ ದಮ್ಮ ಚಕ್ಕ ಪವತ್ತನ ದಿನದ ಪ್ರಯುಕ್ತ ಧರ್ಮ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಗರತ್ನ ಬಂತೇಜಿ, ಸುರೇಶ್‌ಕಂಠಿ, ಸುದರ್ಶನ, ಸಿದ್ದರಾಮಯ್ಯ, ಸಿ.ಎಂ.ದ್ಯಾವಪ್ಪ, ವಿ.ಸಿ.ಉಮಾಶಂಕರ್, ಉಮೇಶ್ ಇದ್ದರು.
Published on

ಮದ್ದೂರು: ಪ್ರಪಂಚದಲ್ಲಿ ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎನ್ನುವ ಸಮಾನತೆ ಸಾರಿದ ಧರ್ಮ ಇದ್ದರೆ ಅದು ಬೌದ್ಧ ಧರ್ಮವಾಗಿದೆ ಎಂದು ನಾಗರತ್ನ ಬಂತೇಜಿ ಅಭಿಪ್ರಾಯಪಟ್ಟರು.

ತಾಲೂಕಿನ ಮಾಲಗಾರನಹಳ್ಳಿಯಲ್ಲಿ ರಾಜ್ಯ ಶೋಷಿತ ಸಮುದಾಯದ ವೇದಿಕೆ ಅಧ್ಯಕ್ಷ ಸುರೇಶ್ ಕಂಠಿ ಅವರ ಡಾ.ಜಿ. ಪರಮೇಶ್ವರ್ ನಿವಾಸದಲ್ಲಿ ಭಾನುವಾರ ದಮ್ಮ ಚಕ್ಕ ಪವತ್ತನ ದಿನದ ಪ್ರಯುಕ್ತ ಆಯೋಜಿಸಿದ್ದ ಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ವಿಶೇಷ ಉಪನ್ಯಾಸ ನೀಡಿದರು.

ಯಾರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಸುವ ಬೌದ್ಧ ಧರ್ಮದಲ್ಲಿ ಯಾವುದೇ ಮೇಲು ಕೀಳು ಎಂಬ ಭಾವನೆ ಇಲ್ಲ. ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿಯು ಪ್ರಾಣಿ ಪಕ್ಷಿಗಳಿಗೆ ಹಿಂಸೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಬೌದ್ಧ ಧರ್ಮದಲ್ಲಿ ದ್ವೇಷ, ಅಸೂಯೆ, ರಾಗ ದ್ವೇಷಗಳಿಬಾರದು. ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಮನುಷ್ಯ ಅನಿಷ್ಠ ಚಟಗಳಿಂದ ದೂರ ಸರಿಯಬೇಕು. ಆಗ ಮಾತ್ರ ಬೌದ್ಧ ಧರ್ಮಕ್ಕೆ ನಿಜವಾದ ಅರ್ಥ ಸಾಧ್ಯವಾಗುತ್ತದೆ ಎಂದು ನಾಗರತ್ನ ಬಂತೇಜಿ ಸಲಹೆ ನೀಡಿದರು.

ಭಾರತದಲ್ಲಿ ಜನ್ಮತಾಳಿದ ಬುದ್ಧ ತನ್ನ ತತ್ವ ಮತ್ತು ಆದರ್ಶಗಳ ಮೂಲಕ ಇಡೀ ಪ್ರಪಂಚಕ್ಕೆ ಬೆಳಕನ್ನು ಚೆಲ್ಲಿದ್ದಾರೆ ಎಂದರು. ರಾಜ್ಯ ಶೋಷಿತ ಸಮುದಾಯದ ವೇದಿಕೆ ಅಧ್ಯಕ್ಷ ಸುರೇಶ್ ಕಂಠಿ, ಬೌದ್ಧ ಉಪಾಸಕರಾದ ಸುದರ್ಶನ ಬೀದರ್, ಸಿದ್ದರಾಮಯ್ಯ, ಡಾ.ಸಿದ್ದರಾಜು. ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ. ದ್ಯಾವಪ್ಪ, ಜಿಲ್ಲಾ ಮುಖಂಡ ಶಂಕರಲಿಂಗೇಗೌಡ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ .ಉಮಾಶಂಕರ್, ಗ್ರಾಪಂ ಅಧ್ಯಕ್ಷ ಈಶ್ವರ್, ಮಾಜಿ ಅಧ್ಯಕ್ಷ ಮಹಾದೇವ್, ರವಿಕುಮಾರ್, ಮುಖಂಡರಾದ ಚಂದ್ರಹಾಸ್, ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net