ತೇರದಾಳದಲ್ಲಿ ಬುದ್ಧ ಮೂರ್ತಿ ಮೆರವಣಿಗೆ

Buddha statue in Teradala
ತೇರದಾಳದಲ್ಲಿ ತಕ್ಷಶಿಲಾ ಮಹಾ ಬುದ್ಧ ವಿಹಾರ ಇಂಟರ್‌ನ್ಯಾಷನಲ್ ಚಾರಿಟೆಬಲ್ ಟ್ರಸ್ಟ್(ರಿ) 68ನೇ ಧಮ್ಮಚಕ್ರ ಪರಿವರ್ತನಾ ದಿನದ ನಿಮಿತ್ತ ಬುದ್ಧ ಮೂರ್ತಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.
Published on

ತೇರದಾಳ: ಪಟ್ಟಣದಲ್ಲಿ ತಕ್ಷಶಿಲಾ ಮಹಾ ಬುದ್ಧ ವಿಹಾರ ಇಂಟರ್‌ನ್ಯಾಷನಲ್ ಚಾರಿಟೆಬಲ್ ಟ್ರಸ್ಟ್(ರಿ) ಸಂಯುಕ್ತ ಆಶ್ರಯದಲ್ಲಿ 68ನೇ ಧಮ್ಮಚಕ್ರ ಪರಿವರ್ತನಾ ದಿನದ ನಿಮಿತ್ತ ಬುದ್ಧ ಮೂರ್ತಿ ಪ್ರತಿಷ್ಠಾಪನೆ, ವಿಹಾರದ ನಾಮಕರಣ, ಹಾಗೂ ಪ್ರಜ್ಞಾಬೋಧಿ ಭಂತೇಜಿಯವರ ವರ್ಷಾವಾಸ ಮುಕ್ತಾಯ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ಬುದ್ಧ ಮೂರ್ತಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಮಹಾವೀರ ವೃತ್ತದಿಂದ ಪ್ರಾರಂಭಗೊಂಡ ಬುದ್ಧ ಮೂರ್ತಿ ಮೆರವಣಿಗೆ ಬಸ್ ನಿಲ್ದಾಣ, ತಹಸೀಲ್ದಾರ್ ಕಚೇರಿ, ಚಾವಡಿ ವೃತ್ತ , ಕನ್ನಡ ಶಾಲೆ, ಕಾಳಿನ ಬಜಾರ್, ಗುಮ್ಮಟ ಗಲ್ಲಿ, ಅಂಬೇಡ್ಕರ್ ವೃತ್ತದಿಂದ ದೇವರಾಜ ನಗರದ ಬುದ್ಧ ವಿಹಾರದವರೆಗೆ ಬಂದು ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಬೇರೆ ಬೇರೆ ರಾಜ್ಯಗಳ ಬೌದ್ಧ ಭಿಕ್ಕುಗಳು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ನೀಲಿ ಧ್ವಜ ರಾರಾಜಿಸಿದವು. ಬುದ್ಧ ಮತ್ತು ಡಾ. ಅಂಬೇಡ್ಕರ ಅವರು ಜಯಘೋಷದೊಂದಿಗೆ ಮೆರವಣಿಗೆಗೆ ಗೋಲಬಾವಿಯ ಜೈಕರ್ನಾಟಕ ಕೈಪೆಟ್ಟಿನವರು ಹಾಗೂ ಸ್ಥಳೀಯ ಹಲಗೆ ಕಲಾವಿದರು ಮೆರುಗು ತಂದರು.

ನಾಗಪುರದ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಮಿತಿ ಅಧ್ಯಕ್ಷ ಭದಂತ ಆರ್ಯ ನಾಗಾರ್ಜುನ ಸುರಯೇ ಸಸಾಯಿ, ಪಟ್ಟಣದ ತಕ್ಷಶಿಲಾ ಮಹಾ ಬುದ್ಧ ಮಹಾ ವಿಹಾರ ಇಂಟರ್‌ನ್ಯಾಷನಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಭವಂತ ಪ್ರಜ್ಞಾ ಬೋಧಿ, ಉಪಾಧ್ಯಕ್ಷ ಥುಪ್ಸತಾನ ಲಾಮಾ ಪ್ಲೇಹ(ಲಡಾಕ್), ಮೀರತ್‌ದ ಡಾ.ಭಿಕ್ಕು ನಾಗಭೂಷಣ, ನಾಗ್ಪುರದ ಭಂತೇಜಿ ನಾಗಾನಂದ, ಭಂತೇಜಿ ನಾಗಪ್ರಕಾಶ, ಭಂತೇಜಿ ಮಹಾನಾಗ್, ಆಂಧ್ರಪ್ರದೇಶದ ಭಿಕ್ಕು ಸದ್ಧಾರಕ್ಕಿತ, ತಮಿಳುನಾಡಿನ ಭಿಕ್ಕು ಮಹಿಂದ ಸಾಕ್ಯ, ಪಟ್ಟಣದ ಪ್ರಮುಖರಾದ ಪರಸಪ್ಪ ಮಾಸ್ತಿ, ಚಿದಾನಂದ ಸರಿಕರ, ಗೌತಮ ರೋಡಕರ, ರಮೇಶ ಧರೆನ್ನವರ, ಹನಮಂತ ರೋಡನ್ನವರ, ಆನಂದ ನಡುವಿನಕೇರಿ, ದಯಾನಂದ ಕಾಳೆ, ರಘುನಾಥ ಹಟ್ಟಿ, ರಾಜು ಸರಿಕರ, ಬಾಳು ಬುರುಡ, ಲಕ್ಷ್ಮಣ ಮಾಸ್ತಿ, ವಿಠ್ಠಲ ಸಿಂಗೆ, ದಯಾನಂದ ಧರೆನ್ನವರ, ಚಿದಾನಂದ ಗುಡಕ್ಕನವರ, ಪರಶುರಾಮ ಕಾಂಬಳೆ, ಹನಮಂತ ಜಗದ್ಮನಿ, ವಸಂತ ಧರೆನ್ನವರ, ಸದಾಶಿವ ಸಿಂಗೆ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net