

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಗವಾನ ಬುದ್ಧ ಪ್ರತಿಷ್ಠಾನ ಟ್ರಸ್ಟ್, ಗಣಕರಂಗ ಹಾಗೂ ಬಹಿಷತ ಹಿತಕಾರಿಣಿ ಸಭಾ ವತಿಯಿಂದ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಮೇ 28ರಂದು ಸಂಜೆ 5 ಗಂಟೆಗೆ ಬುದ್ಧ ರ್ಪೂಣಿಮೆ ಆಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನಿವೃತ್ತ ಅಧಿಕಾರಿ ಡಾ. ಸದಾಶಿವ ರ್ಮಜಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯ ಭಂತೆ ಧಮ್ಮಪಾಲ, ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ ಸಾನಿಧ್ಯ ವಹಿಸಲಿದ್ದು, ಜಾನಪದ ವಿವಿ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಕನ್ನಡ ಮತ್ತು ಸಂಸತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಸುಭಾಸಚಂದ್ರ ನಾಟೀಕರ ಆಗಮಿಸುವರು. ಪಿ.ಎಸ್. ಮಾಳಗಿ ಉಪನ್ಯಾಸ ನೀಡುವರು. ಅಶೋಕ ಚಲವಾದಿ ಅಧ್ಯಕ್ಷತೆ ವಹಿಸುವರು ಎಂದರು.
ರಾಜೀವ ಕೃಷ್ಣಾ ಮೇತ್ರಿ, ಹೇಮಂತ ರಾಮಡಗಿ ಹಾಗೂ ಸಿ.ಎಂ. ಚನಬಸಪ್ಪ ಅವರಿಗೆ ಸನ್ಮಾನಿಸಲಾಗುವುದು. ನಂತರ ನಡೆಯುವ ಸಾಂಸತಿಕ ಕಾರ್ಯಕ್ರಮಗಳಲ್ಲಿ ಡಾ. ಸದಾಶಿವ ರ್ಮಜಿ ಹಾಗೂ ತಂಡದಿಂದ ಬುದ್ಧ ಪ್ರಾರ್ಥನೆ, ಡಾ. ಅನೀಲ ಮೇತ್ರಿ, ಅನುರಾಗ ಸಾಂಸತಿಕ ಕಲಾ ಬಳಗದಿಂದ ಭಿಮಗೀತೆಗಳು, ಸಿದ್ದರಾಮ ಹಿಪ್ಪರಗಿ ಹಾಗೂ ತಂಡದಿಂದ ಧಮ್ಮ ಕಾವ್ಯವಾಚನ, ಡಾ. ಪ್ರಕಾಶ ಮಲ್ಲಿಗವಾಡ ಮತ್ತು ತಂಡದಿಂದ ನೃತ್ಯ ರೂಪಕ ಹಾಗೂ ಭಾಗ್ಯಶ್ರೀ ಗಾಳೆಮ್ಮನವರ ಮತ್ತು ತಂಡ ಜಾನಪದ ನೃತ್ಯ ಪ್ರದಶಿರ್ಸಲಿದ್ದಾರೆ ಎಂದರು.
ಪ್ರಕಾಶ ಮಲ್ಲಿಗವಾಡ, ಮಲ್ಲಪ್ಪ ಹೊಂಗಲ, ಶಿವಾನಂದ ಅಮರಶೆಟ್ಟಿ, ಇತರರು ಇದ್ದರು.