

ಕಂಪ್ಲಿ: ನಗರದ ಕರ್ನಾಟಕ ಬೌದ್ಧ ಸಮಾಜದಿಂದ ಪಟ್ಟಣದ ಸಕ್ಕರೆ ಕಾರ್ಖಾನೆ ಏರಿಯಾದಲ್ಲಿ ಮುಸ್ಲಿಂ ಸಮುದಾಯದ ಅಬ್ದುಲ್ ಶಾರುಖ್ ಮನೆಯಲ್ಲಿ ಭಾನುವಾರ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದನ್ನೂ ಓದಿ:ಬುದ್ಧ ಪೂರ್ಣಿಮೆ ಆಚರಣೆ
ಬೌದ್ಧ ಸಮಾಜದ ಜಿಲ್ಲಾಧ್ಯಕ್ಷ ಸುಗ್ಗೇನಹಳ್ಳಿ ರಮೇಶ ಮಾತನಾಡಿ, ಬುದ್ಧನ ಬೋಧನೆಗಳು ವೈಜ್ಞಾನಿಕ ದೃಷ್ಟಿಕೋನಗಳಿಂದ ಕೂಡಿದ್ದು, ಎಲ್ಲ ಧರ್ಮದವರು ಅನುಸರಿಸಬಹುದಾಗಿದೆ, ಬುದ್ಧ ಧರ್ಮಾತೀತ ವ್ಯಕ್ತಿ ಎಂದರು. ಸಂವಿಧಾನ ಸಂಗಾತಿಯ ಸಂಚಾಲಕಿ ಅಮೀನಾ ಭೀಮಗೀತೆ ಹಾಡಿದರು. ಸಾಧಕರಾದ ಎಚ್.ಸಿ.ರಾಘವೇಂದ್ರ, ಟಿ.ಎಚ್.ಎಂ.ರಾಜಕುಮಾರ ಅವರನ್ನು ಗೌರವಿಸಲಾಯಿತು.
ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಚಾರ್ಯ ಸಿದ್ದಪ್ಪ ಪರಮೇಶ್ವರ್, ಶಿಕ್ಷಕ ಯೋಗರಾಜ ಕಹಳೆ, ಬೌದ್ಧ ಸಮಾಜದ ಜಿಲ್ಲಾ ಪದಾಧಿಕಾರಿಗಳಾದ ಪಿ.ಸಿ.ಅಂಜಿನಪ್ಪ, ಪಿ.ಸಿ.ಉಮೇಶ, ಸುಧಾಕರ, ಸಿ.ಮಂಜುನಾಥ ಇತರರಿದ್ದರು.