

ಮೈಸೂರು: ವಿಶ್ವಮೈತ್ರಿ ಬುದ್ಧ ವಿಹಾರ, ಭಾರತೀಯ ವಿದ್ಯಾರ್ಥಿ ಸಂಘ ಮತ್ತು ನೆಲೆ ಹಿನ್ನೆಲೆ ಸಂಸ್ಥೆಯಿಂದ ಜುಲೈ 21ರಂದು ನಗರದಲ್ಲಿ ಬುದ್ಧ ಪೂರ್ಣಿಮೆ ಆಯೋಜಿಸಲಾಗಿದೆ ಎಂದು ವಿಶ್ವ ಮೈತ್ರಿ ಬುದ್ಧ ವಿಹಾರದ ನಿರ್ವಾಹಕ, ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ಅಂದು ಬೆಳಗ್ಗೆ 7.30ಕ್ಕೆ ಸಿದ್ದಾರ್ಥನಗರದ ಬುದ್ಧ ವೃತ್ತದಲ್ಲಿ ಬುದ್ಧ ವಂದನೆ ನಡೆಯಲಿದೆ. ಬಳಿಕ ಧಮ್ಮ ನಡಿಗೆ ಪ್ರಾರಂಭವಾಗಲಿದ್ದು, ವಿನಯ ಮಾರ್ಗ, ರಾಜ್ ಕುಮಾರ್ ರಸ್ತೆ ಮುಖಾಂತರ ಮಾನಸಿ ನಗರದ ಧ್ಯಾನ ಕೇಂದ್ರಕ್ಕೆ ತಲುಪಲಿದೆ. ಅಲ್ಲಿ 1.30ರವರೆಗೆ ಬೋಧಿದತ್ತ ಭಂತೇಜಿ ಅವರಿಂದ ಧಮ್ಮ ಪ್ರವಚನ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.