

ಮಂಡ್ಯ: ಬುದ್ಧ ಭಾರತ ಫೌಡೇಷನ್ ವತಿಯಿಂದ ವಿಶ್ವಶಾಂತಿ ಮತ್ತು ಸುಭದ್ರತೆಗಾಗಿ ಬೌದ್ಧರ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಜ.14ರಂದು ಬೆಳಗ್ಗೆ 10.30ಕ್ಕೆ ಶ್ರೀರಂಗಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದ ಗೌತಮ ಬುದ್ಧ ಧಮ್ಮ ಧ್ಯಾನ ಮತ್ತು ಜ್ಞಾನಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್‌ನ ಅಧ್ಯಕ್ಷ ಜೆ.ರಾಮಯ್ಯ ತಿಳಿಸಿದರು.
ಮಾನವರ ಪರಿಪೂರ್ಣ ಜೀವನಕ್ಕೆ ಬುದ್ಧ ಅವರು ಮಾರ್ಗಗಳನ್ನು ತಿಳಿಸಿದ್ದಾರೆ. ಆ ಮಾರ್ಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸ್ತಿರ ಜೀವನ ನಡೆಸಲು ಜನರಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ವಾಭಿಮಾನಿ ಸಮಸಮಾಜ, ಅಂಬೇಡ್ಕರ್ ವಾರಿಯರ್ಸ್, ಜೈ ಭೀಮ್ ಸಂಘಟನೆ, ಪ್ರಗತಿಪರ ಒಕ್ಕೂಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೊಳ್ಳೇಗಾಲದ ಮಾನೋರಕ್ಕಿತ ಭಂತೇಜೀ ಜೀತವನ, ಅಂದಾನಿ, ಗಂಗರಾಜು, ಸ್ವಾಮಿ, ನಂಜುಂಡಮೌರ್ಯ, ನರಸಿಂಹಮೂರ್ತಿ, ಎಂ.ವಿ.ಕೃಷ್ಣ ಇದ್ದರು.