ಬೂದಪ್ಪನವರಗೆ ಗುರುವಿನಹಳ್ಳಿ ಗ್ರಾಪಂ ಅಧ್ಯಕ್ಷ ಪಟ್ಟ

GURUVINAHALLI
Published on

ಕುಂದಗೋಳ: ತಾಲೂಕಿನ ಗುರುವಿನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಮಂಜುನಾಥ ಬೂದಪ್ಪನವರ ಹಾಗೂ ಉಪಾಧ್ಯಕ್ಷೆಯಾಗಿ ರತ್ನವ್ವ ಪಡೆಸೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಐ.ಡಿ. ಬಳ್ಳಾರಿ ಶುಕ್ರವಾರ ಘೊಷಿಸಿದರು.

ಅಧ್ಯಕ್ಷ ಮಂಜುನಾಥ ಬೂದಪ್ಪನವರ ಮಾತನಾಡಿ, ‘ಗ್ರಾಮಕ್ಕೆ ಶಾಸಕರು 3 ಎಕರೆ ಜಾಮೀನು ಕೊಡಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ. ಮೂರು ಎಕರೆ ಜಮೀನು ಖರೀದಿಸಿದ ಬಳಿಕ ನವ ಗ್ರಾಮ ನಿರ್ವಣ, ಗುರುವಿನಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಪೂರ್ಣ ಪ್ರಮಾಣದಲ್ಲಿ ಸೋಲಾರ್ ಲೈಟಿಂಗ್ ವ್ಯವಸ್ಥೆ, ಮುಖ್ಯ ಜಾಗಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ, ರಸ್ತೆ, ಕೆರೆ ಕಟ್ಟೆಗಳು, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಒಟ್ಟಾರೆ ಮೂಲಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು. ಸರ್ವ ಸದಸ್ಯರು ಹಾಗೂ ಗುರು-ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು. ಅಬ್ದುಲಸಾಬ್ ಅಕ್ಕಿ, ರಾಜಕುಮಾರ ನವಲೂರ, ಜಯಶ್ರೀ ಮಾಡಲಗಿ, ಕಲ್ಲಮ್ಮ ಇಂಗಳಗಿ, ಸರ್ವ ಸದಸ್ಯರು ಹಾಗೂ ಪಿಡಿಒ ಬಸವರಾಜ ಬಾಗಲ್, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net