ಬೂದನಗುಡ್ಡ ಬಸವೇಶ್ವರ ರಥೋತ್ಸವ

h20-budanagudda
Published on

ಹುಬ್ಬಳ್ಳಿ: ತಾಲೂಕಿನ ಬೂದನಗುಡ್ಡದ ಶ್ರೀ ಬಸವಣ್ಣ ದೇವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದಿಂದ ರಾಜ್ಯ ಮಾರ್ಗವಾಗಿ ಹೊರಟ ರಥವು ಪಾದ ಗಟ್ಟಿಗೆ ತೆರಳಿದ ಬಳಿಕ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ರಥವು ದೇವಸ್ಥಾನ ತಲುಪಿತು.

ರಥ ಸಾಗುವ ಮಾರ್ಗದಲ್ಲಿ ಕರಡಿ ಮಜಲು, ಡೊಳ್ಳು, ಹೆಜ್ಜೆ ಮೇಳ ಇತ್ಯಾದಿ ವಾದ್ಯ ಮೇಳ ಕಳೆಗಟ್ಟಿದ್ದವು.

ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಬಸವಣ್ಣನ ಹಾಗೂ ಚನ್ನಬಸವಣ್ಣನವರಿಗೆ ವಿಶೇಷ ಪೂಜೆ, ಅಭಿಷೇಕ, ರುದ್ರ ಪಠಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಈರಪ್ಪ ಯಮ್ಮಿ, ಧರ್ಮದರ್ಶಿಗಳಾದ ಮೋಹನ ಅಸುಂಡಿ, ಸಿದ್ಧಾರ್ಥ ರಾಯನಾಳ, ಮಂಜುನಾಥ ದಾಸ್ತಿಕೊಪ್ಪ, ಪ್ರಭು ಶಟ್ಟರ್, ಮಹಾಂತೇಶ ಗಿರಿಮಠ, ಮಹಾಂತೇಶ ಹಾದಿಮನಿ, ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net