

ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ಆಸ್ತಿಗೆ ಾರ್ಮ್- 2 ನೀಡಲು ನಿರ್ಧರಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬುಡಾ ಅನುಮೋದನೆ ಕಡ್ಡಾಯಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ನಗರ ಮಾಪನ ಕಚೇರಿಯಿಂದ ಅನುಮೋದನೆಗೊಂಡಿರುವ ಆಸ್ತಿಯ ಮಾಲೀಕರು ಏನು ಮಾಡಬೇಕೆಂದು ತಿಳಿಯದೆ ಸಂಕಷ್ಟದಲ್ಲಿದ್ದಾರೆ. ನಗರದ ಬಹುತೇಕ ಖಾಸಗಿ ಸ್ವತ್ತು ನಗರ ಮಾಪನ ಕಚೇರಿಯಿಂದ ಅನುಮೋದನೆಗೊಂಡಿದೆ.
ಈ ಹಿನ್ನೆಲೆಯಲ್ಲಿ ನಗರ ಮಾಪನ ಕಚೇರಿಯಿಂದ ಅನುಮೋದನೆಗೊಂಡಿರುವ ಆಸ್ತಿಗೂ ನಿಗದಿತ ಕಾಲಮಿತಿಯಲ್ಲಿ ಾರ್ಮ್-2 ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಡಿ.ಉಗಮರಾವ್, ನಗರ ಘಟಕದ ಅಧ್ಯಕ್ಷ ಬಿ.ಹನುಮಂತರೆಡ್ಡಿ, ಪದಾಧಿಕಾರಿಗಳಾದ ಮಮತಾ, ವಿನಯಕುಮಾರ್, ಲಕ್ಷ್ಮಣರೆಡ್ಡಿ, ಜಗದೀಶ, ಬಸವರಾಜ ಸಿಂಗಾಡಿ ಇದ್ದರು.