ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ

22BTP01
Published on

ಬೆಟ್ಟದಪುರ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಕಸ್ತೂರ ಬಾ ಯುವತಿ ಮಂಡಳಿ ಅಧ್ಯಕ್ಷೆ ಅನಿತಾ ತೋಂಟಪ್ಪಶೆಟ್ಟಿ ತಿಳಿಸಿದರು.

ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಭ್ರಮರಾಂಬ ಮಹಿಳಾ ಸಮಾಜ, ಕಸ್ತೂರ ಬಾ ಯುವತಿ ಮಂಡಳಿ ಹಾಗೂ ರೋಟರಿ ಕ್ಲಬ್ ಪಿರಿಯಾಪಟ್ಟಣ ಐಕಾನ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ ಮಹಿಳೆಯರ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪಂದ್ಯಗಳನ್ನು ಗೆಲ್ಲುವುದು ಮತ್ತು ವೈಯಕ್ತಿಕ ಗುರಿಗಳನ್ನು ಸಾಧಿಸುವ ಕಾರ್ಯದಿಂದ ಮಹಿಳೆಯರಿಗೆ ಅವರ ಸಾಮರ್ಥ್ಯದ ಅರಿವಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಕ್ರೀಡಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ತರಬೇತಿಗೆ ಸೌಲಭ್ಯಗಳ ಕೊರತೆ ಮತ್ತು ಕ್ರೀಡಾ ರಂಗದ ಬಗ್ಗೆ ಇರುವ ನಕಾರಾತ್ಮಕ ಮನೋಭಾವಗಳೇ ಮಹಿಳೆಯ ಪ್ರಗತಿಗೆ ಮಾರಕವಾಗಿವೆ. ಅದನ್ನು ಮೀರಿ ನಿಂತರೆ, ಕ್ರೀಡೆಗಳು ಗ್ರಾಮೀಣ ಮಹಿಳೆಯರ ಜೀವನದಲ್ಲಿ ಮಹತ್ತರ ಬದಲಾವಣೆ ತರಲಿವೆ ಎಂದರು. ಬೆಟ್ಟದತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಜೇ ಅರಸ್, ಗ್ರಾಮದ ಮಹಿಳೆಯರಾದ ಸುಮಾ ಜಗದೀಶ್, ಲಕ್ಷ್ಮೀ ಚಂಗಪ್ಪ, ಮಂಜುಳಾ, ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net