

ಬೆಟ್ಟದಪುರ: ಮೈಸೂರಿನ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವತಿಯಿಂದ ಇತ್ತೀಚೆಗೆ ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲರವ ಕಾರ್ಯಕ್ರಮದಲ್ಲಿ ಬೆಟ್ಟದಪುರ ಸಮೀಪದ ಗಂಗನಕುಪ್ಪೆ ಯುವ ಗಾಯಕ, ರವಿ ಸಂತು ಬಳಗದ ಕಲಾವಿದ ಲೋಕೇಶ್ ಅವರಿಗೆ ಜಾನಪದ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಡಾ.ಸಿ.ಪಿ ಕೃಷ್ಣಕುಮಾರ, ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಡಾ.ಮಂಜುಳಾ ಪಾವಗಡ, ಸಾಮಾಜಿಕ ಕಾರ್ಯಕರ್ತ ರಘುರಾಮ ವಾಜಪೇಯಿ, ಕಲಾವಿದ ರವಿ ಸಂತೋಷ್ ಇದ್ದರು.