ಸತತ ಅಭ್ಯಾಸ ಇದ್ದರೆ ಉತ್ತಮ ಫಲಿತಾಂಶ ಲಭ್ಯ

12BTP01 COLLEGE
Published on

ಬೆಟ್ಟದಪುರ: ಕಟ್ಟುನಿಟ್ಟಿನ ಪರೀಕ್ಷಾ ಪದ್ಧತಿ ಇದ್ದರೂ ಸತತ ಅಭ್ಯಾಸ ಇದ್ದರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂದು ಡಿಟಿಎಂಎನ್ ವಿದ್ಯಾಸಂಸ್ಥೆ ನಿರ್ದೇಶಕ ಗುರುದತ್ ಹೇಳಿದರು. ಇಲ್ಲಿನ ಡಿಟಿಎಂಎನ್ ವಿದ್ಯಾಸಂಸ್ಥೆ ಪ.ಪೂ. ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗೌರವಿಸಿ ಅವರು ಮಾತನಾಡಿದರು.

ಸಂಸ್ಥೆಯ ಖಜಾಂಚಿ ಪಿ.ರವಿ ಮಾತನಾಡಿ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಸೌಂದರ್ಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 10ನೇ ರ‌್ಯಾಂಕ್ ಪಡೆದಿರುವುದು ಹೆಮ್ಮೆ . ಇವರೊಂದಿಗೆ ಅರ್ಚನಾ, ಕೃತಿಕಾ, ದೀಪ್ತಿ ಅವರೂ ಟಾಪರ್ ಆಗಿರುವುದು ಕಾಲೇಜಿಗೆ ಹಾಗೂ ಪಾಲಕರಿಗೆ ಕೀರ್ತಿ ತಂದಿದೆ ಎಂದರು. ಸಂಸ್ಥೆ ಅಧ್ಯಕ್ಷ ಚಂದ್ರಶೇಖರ, ಆಡಳಿತಾಧಿಕಾರಿ ಜೆ.ಸಿ ನಟರಾಜು, ಕಾರ್ಯದರ್ಶಿ ಶೈಲಪ್ಪ , ಪ್ರಾಂಶುಪಾಲ ಸತೀಶ, ಉಪನ್ಯಾಸಕ ಮನು, ಪ್ರೌಢಶಾಲೆ ಮುಖ್ಯಶಿಕ್ಷಕ ಮುರಳಿಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net