ಬೆಟ್ಟದಪುರ ಠಾಣೆಯಲ್ಲಿ ಶಾಂತಿ ಸಮಿತಿ ಸಭೆ

17BTP01
Published on

21ರಂದು ಹನುಮ ಜಯಂತಿ ಕಾರ್ಯಕ್ರಮ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಿಕ್ಕನೇರಳೆ ಗ್ರಾಮದಲ್ಲಿ ಡಿ.21ರಂದು ಹನುಮ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಮಿತಿ ಸಭೆ ನಡೆಸಲಾಯಿತು. ಹುಣಸೂರು ವಲಯ ಡಿವೈಎಸ್‌ಪಿ ಗೋಪಾಲಕೃಷ್ಣ ಮಾತನಾಡಿ, ಗ್ರಾಮದ ಯಾವುದೇ ಸಮುದಾಯದವರ ನೆಮ್ಮದಿಗೆ ಧಕ್ಕೆ ಉಂಟಾಗದಂತೆ ಸುವ್ಯವಸ್ಥೆ ಕಾಪಾಡಿಕೊಂಡು ಹನುಮ ಜಯಂತಿ ಆಚರಣೆ ಮಾಡಬೇಕು ಎಂದರು. ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಅವರು ಸೂಚಿಸಿದರು.

ವೃತ ನಿರೀಕ್ಷಕ ದೀಪಕ್ ಮಾತನಾಡಿ, ಗ್ರಾಮಗಳಲ್ಲಿ ಹಬ್ಬ, ಉತ್ಸವಗಳ ಆಚರಣೆಗೆ ಎಲ್ಲಾ ಸಮುದಾಯದ ಸಹಕಾರ ಅತ್ಯಗತ್ಯ. ಸಹಬಾಳ್ವೆಯಿಂದ ಜೀವನ ನಡೆಸಬೇಕು. ಹನುಮ ಜಯಂತಿಯ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಘಟನೆ ಸಂಭವಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಾರನಹಳ್ಳಿ ಉಪತಸೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕ ಆನಂದ, ಪಿಡಿಒ ಮಂಜುನಾಥ, ಪಿಎಸ್‌ಐ ಸುರೇಶ್, ಶಿವಶಂಕರ್, ಚಿಕ್ಕನೇರಳೆ, ದೊಡ್ಡನೇರಳೆ, ಹಾರನಹಳ್ಳಿ, ಚಪ್ಪರದಹಳ್ಳಿ, ಮಂಟಿಬಿಳಗುಲಿ, ಬ್ಯಾಡರ ಬಿಳಗುಲಿ, ವಡೇರಹೊಹಳ್ಳಿ, ಬೆಟ್ಟದಪುರದ ಮುಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net