ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಈ ಸಂಘವು 2024-25ನೇ ಸಾಲಿನಲ್ಲಿ ರೂ.3,22,842 ನಿವ್ವಳ ಲಾಭಗಳಿಸಿದೆ. ಇದೆ ರೀತಿ ಸಂಘವು ಹೆಚ್ಚಿನ ಆದಾಯಗಳಿಸುವ ಮೂಲಕ ಉತ್ತಮವಾಗಿ ಅಭಿವೃದ್ಧಿ ಹೊಂದುಕೊಂಡು ಹೋಗಲಿ. ಉತ್ಪಾದಕರು ತಮ್ಮ ಹಸುಗಳ ಆರೋಗ್ಯದ ಜತೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಹೆಚ್ಚಿನ ಆದಾಯಗಳಿಸಬೇಕು ಎಂದು ಸಲಹೆ ನೀಡಿದರು.