

ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ರಸ್ತೆ ನಿರ್ಮಾಣ ಮಾಡಲು ಸರ್ಕಾರದ ವತಿಯಿಂದ 50 ಕೋಟಿ ರೂ. ಹಣ ಮಂಜೂರು ಮಾಡಿಸಿದ ಸಚಿವ ಕೆ.ವೆಂಕಟೇಶ್ ಅವರಿಗೆ ಭಾನುವಾರ ಬೆಟ್ಟದತುಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡರಾದ ಕುಡಕೂರು ಪ್ರಕಾಶ್ ರಾಜ್ ಅರಸ್, ಯಶೋಧರ, ಕೃಷ್ಣೇ ಗೌಡ. ಡೈರಿ ರಾಮೇಗೌಡ, ಬಲರಾಮೇಗೌಡ, ಸ್ವಾಮಿಗೌಡ ಇತರರು ಇದ್ದರು.