ಕಾಪನಹಳ್ಳಿ ಗವಿಮಠದಲ್ಲಿ ಬಿಎಸ್‌ವೈ ಪೂಜೆ ಸಲ್ಲಿಕೆ

IMG-20250220-WA0203
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನೆ ದೇವರು ಕಾಪನಹಳ್ಳಿ ಗವಿಮಠಕ್ಕೆ ಗುರುವಾರ ಆಗಮಿಸಿ ಪೂಜೆ ಸಲ್ಲಿಸಿದರು.
Published on

ಕೆ.ಆರ್.ಪೇಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ದೇವರು ಕಾಪನಹಳ್ಳಿ ಗವಿಮಠಕ್ಕೆ ಗುರುವಾರ ಆಗಮಿಸಿ ಪೂಜೆ ಸಲ್ಲಿಸಿದರು.

ಪವಾಡ ಪುರುಷ ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದರು. ಯಡಿಯೂರಪ್ಪ ಅವರನ್ನು ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ ಬರಮಾಡಿಕೊಂಡರು.

ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಾನು ಮನೆ ದೇವರ ಪೂಜೆಗೆ ಬಂದಿದ್ದೇನೆ. ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ, ರಾಜ್ಯ ಬಿಜೆಪಿ ಒಳಜಗಳ, ಗುಂಪುಗಾರಿಕೆ, ಭಿನ್ನಮತವೆಲ್ಲವೂ ತಾನೇ ತಾನಾಗಿಯೇ ಸರಿಯಾಗುತ್ತದೆ. ಕಾದು ನೋಡಿ ಎಂದು ಹೇಳಿದರು.

ತಮ್ಮ ಹುಟ್ಟೂರು ಬೂಕನಕೆರೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮರಕ್ಷಕ ಶ್ರೀ ಕೈವಲ್ಯೆಶ್ವರ ದೇವಾಲಯದ ಕಲ್ಯಾಣ ಮಂಟಪದ ಕಾಮಗಾರಿ ವೀಕ್ಷಿಸಿದರು. ಗುಣಮಟ್ಟದ ಕೆಲಸ ನಡೆಸಿ ಆದಷ್ಟು ಬೇಗ ಕಲ್ಯಾಣ ಮಂಟಪ ಲೋಕಾರ್ಪಣೆಗೆ ಸಜ್ಜುಗೊಳಿಸುವಂತೆ ಸೂಚನೆ ನೀಡಿದರು. ಬೂಕನಕೆರೆ ಗ್ರಾಮದಲ್ಲಿ ತಮ್ಮ ಸಹೋದರಿ ಪುಟ್ಟಾಮಣಿಯಮ್ಮ ಅನಾರೋಗ್ಯ ಪೀಡಿತರಾಗಿದ್ದ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಟಪ್ಪಶೆಟ್ಟಿ, ವೀರಶೈವ ಮುಖಂಡ ಬ್ಯಾಂಕ್ ಪರಮೇಶ್ವರ್, ಬೂಕನಕೆರೆ ಮಧುಸೂದನ್, ಪುಟ್ಟರಾಜು, ಬಿಜೆಪಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net