ಸೈಕಲ್​ ತುಳಿದು ಬಿಜೆಪಿ ಕಟ್ಟಿದ ಬಿಎಸ್​ವೈ

qssd
Published on

ಮುಳಬಾಗಿಲು: ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ಸೈಕಲ್​ ತುಳಿದು ಬಿಜೆಪಿ ಕಟ್ಟಿದ ಮಹಾನ್​ ನೇತಾರ. ಅವರು ಹಾಗೂ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಯತ್ನಾಳ್​ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದರು.

ತಾಲೂಕಿನ ಕುರುಡುಮಲೆಯ ಪುರಾಣ ಪ್ರಸಿದ್ಧ ಶ್ರೀ ಲಕ್ಷಿ ಗಣಪತಿ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಯತ್ನಾಳ್​ ಹಿಂದು ಹುಲಿಯಲ್ಲ, ಅದು ಇಲಿ. ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್​, ಒಳಗಿನ ದುಷ್ಟಶಕ್ತಿ ಪಕ್ಷ ವಿರೋಧಿಗಳು. ಕಾಂಗ್ರೆಸ್​ ಮುಖವಾಣಿಯಂತೆ ಯತ್ನಾಳ್​ ಕೆಲಸ ಮಾಡ್ತಿದ್ದಾರೆ. ಸೋನಿಯಾಗಾಂಧಿ, ರಾಹುಲ್​ ಗಾಂಧಿಯಿಂದ ಸುಪಾರಿ ಪಡೆದುಕೊಂಡಂತೆ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪಕ್ಷ ಕಟ್ಟಿದವರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್​ಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲ ಇಲ್ಲ. ವಕ್ಫ್​ ವಿರುದ್ಧ ಹೋರಾಟ ಮಾಡು ಎಂದು ರಾಷ್ಟ್ರೀಯ ನಾಯಕರು ಹೇಳಿಲ್ಲ. ಟಿಪ್ಪು ಖಡ್ಗ ಇಟ್ಟುಕೊಂಡು ಓಡಾಡಿದ್ದಾರೆ, ನಾನು ಈ ಬಗ್ಗೆ ಬಾಯಿ ಬಿಚ್ಚುತ್ತೇನೆ ಎಂದ ಅವರು, ಬಿ.ವೈ.ವಿಜಯೇಂದ್ರ ಅವರು ಮುಂದೆ ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ.ಸಿ. ಪಾಟೀಲ್​ ಮಾತನಾಡಿ, ಪಕ್ಷದೊಳಗಿದ್ದು ಒಳಗೇ ಚೂರಿ ಹಾಕೋರು ಇದ್ದಾರೆ. ಯತ್ನಾಳ್​ ಅವರು ಬಿಜೆಪಿ ಶಾಲು ಹಾಕ್ಕೊಂಡು ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡುತ್ತಾರೆ. ಅವರ ವಿರುದ್ಧ ಯಾರೇ ಮಾತನಾಡಿದರೂ ಅವರ ವಿಷಯ ಹೊರಗೆ ತೆಗೀತೀನಿ ಅಂತಾರೆ. ಈಗ ಅದೇನ್​ ತೆಗೀತೀರಿ ತೆಗಿರಿ ಎಂದು ಸವಾಲು ಹಾಕಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಗ್ಯಾರಂಟಿ ಕಾರಣ. ಗೃಹಲಕ್ಷಿ$್ಮ ಹಣ ಹಾಕಿ ಚುನಾವಣೆ ಗೆದ್ರು.

ಹುಚ್ಚರಂತೆ ಯತ್ನಾಳ್​ ಮಾತನಾಡ್ತಿದ್ದಾರೆ, ಅವರು ಕೊಡುವ ಹೇಳಿಕೆ ಅವರಿಗೇ ಸೀಮಿತ ಎಂದರು.

ಗೋಮುಖ ವ್ಯ್ರಾ

ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದು ಯತ್ನಾಳ್​ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ನೀನೊಬ್ಬ ಗೋಮುಖ ವ್ಯಾಘ್ರ, ಪಕ್ಷದಿಂದ ಅಮಾನತು ಆಗಿದ್ದಾಗ ಮುಸ್ಲಿಮರಿಗೆ ಇಫ್ತಿಯಾರ್​ ಕೂಟ ಮಾಡಿದ್ದೆ. ಪಕ್ಷದಲ್ಲಿ ಸ್ವಯಂ ಘೋಷಿತ ಹಿಂದು ಹುಲಿ ಎಂದು ಹೇಳ್ತೀಯ, ನಮಗೂ ನಾಟಿ ಮಾತುಗಳು ಬರುತ್ತವೆ ಎಂದು ಎಚ್ಚರಿಕೆ ನೀಡಿದರು. ಯತ್ನಾಳ್​ ರೇಣುಕಾಚಾರ್ಯ ವಿರುದ್ಧ ಲಫೂಟ್​ ನಾಯಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕೆರಳಿ ಕೆಂಡವಾದ ರೇಣುಕಾಚಾರ್ಯ, ನಾನಲ್ಲ ಸ್ವಯಂ ಘೋಷಿತ ಹಿಂದು ನಾಯಕ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

ಮತ್ತೆ ಎನ್​ಡಿಎ ಅಧಿಕಾರ ಹಿಡಿಯಬೇಕು

ನಾವೆಲ್ಲ ಒಗ್ಗಟ್ಟಾಗಿದ್ದೇವೆ, ಪಕ್ಷ ಸಂಘಟನೆ ಮಾಡುತ್ತೇವೆ. ರಾಜ್ಯದಲ್ಲಿ ಎನ್​ಡಿಎ ಸರ್ಕಾರ ಬರಬೇಕು ಅನ್ನೋದು ನಮ್ಮ ಉದ್ದೇಶ. ಅದಕ್ಕಾಗಿ ಎಲ್ಲರೂ ಪ್ರವಾಸ ಮಾಡುತ್ತಿದ್ದೇವೆ. ನಮ್ಮ ಕ್ಷೇತ್ರಗಳಲ್ಲಿ ನಾವೆಲ್ಲರೂ ಮತ್ತೆ ಗೆಲ್ಲಬೇಕಿದೆ ಎಂದು ಕಟ್ಟಾ ಸಬ್ರಹ್ಮಣ್ಯನಾಯ್ಡು

ಹೇಳಿದರು.

ಜಿಲ್ಲೆಯ ಮಾಜಿ ಶಾಸಕರಾದ ಕೆಜಿಎಫ್​ನ ವೈ. ಸಂಪಂಗಿ, ಬಂಗಾರಪೇಟೆಯ ಬಿ.ಪಿ.ವೆಂಕಟಮುನಿಯಪ್ಪ, ಎಂ. ನಾರಾಯಣಸ್ವಾಮಿ, ರಾಜ್ಯ ಮಾವು ಮಂಡಳಿ ಮಾಜಿ ಅಧ್ಯಕ್ಷ ಎಂ.ಕೆ.ವಾಸುದೇವ, ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್​, ವಕ್ತಾರ ಎಸ್​. ಬಿ. ಮುನಿವೆಂಕಟಪ್ಪ, ರೈತ ಮೋರ್ಚಾ ಜಿಲ್ಲಾ ಮಾಜಿ ಅಧ್ಯಕ್ಷ ಗುಮ್ಲಾಪುರ ಬಾಲಕೃಷ್ಣಗೌಡ, ಒಬಿಸಿ ಜಿಲ್ಲಾ ಮಾಜಿ ಅಧ್ಯಕ್ಷ ಕೋಳಿ ಕೆ.ಎಚ್​. ನಾಗರಾಜ್​, ಮುಳಬಾಗಿಲು ನಗರ ಮಂಡಲ ಅಧ್ಯಕ್ಷ ಕಾರ್ಪತಿ ಕೆ. ಜಿ. ವೆಂಕಟರಮಣ ಅಮರ್​, ಗ್ರಾಮಾಂತರ ಮಂಡಲ ಅಧ್ಯಕ್ಷ ನಂಗಲಿ ಸುರೇಶ್​ ರಾಜು, ಪ್ರಧಾನ ಕಾರ್ಯದರ್ಶಿಗಳಾದ ದೊಡ್ಡಿಗಾನಹಳ್ಳಿ ಮಂಜುನಾಥ್​, ಮಲ್ಲೇಕುಪ್ಪ ಸೋಮಶೇಖರ್​, ಕೆ.ಆರ್​. ವಿಶ್ವನಾಥ್​ಕುಮಾರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net