ಬಿಎಸ್‌ವೈ ಹಿರಿಯಣ್ಣ, ನಮ್ದು ಅಣ್ಣ-ತಮ್ಮನ ಸಂಬಂಧ

kse
ರಾಷ್ಟ್ರಭಕ್ತರ ಬಳಗ ಸೇರ್ಪಡೆ ಕಾರ್ಯಕ್ರಮವನ್ನು ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. ಸುವರ್ಣಾ ಶಂಕರ್, ಕೆ.ಇ.ಕಾಂತೇಶ್, ಇ.ವಿಶ್ವಾಸ್ ಮುಂತಾದವರಿದ್ದರು.
Published on

ಶಿವಮೊಗ್ಗ: ನಂದು, ಬಿ.ಎಸ್.ಯಡಿಯೂರಪ್ಪಂದು ಅಣ್ಣ-ತಮ್ಮನ ಸಂಬಂಧ. ಅವರು ನನಗೆ ಹಿರಿಯಣ್ಣ. ನಾನು ಆಸ್ಪತ್ರೆಯಲ್ಲಿದ್ದಾಗ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ರು. ನನ್ನ ಜನ್ಮದಿನಕ್ಕೆ ಮಾಧ್ಯಮಗಳ ಮೂಲಕ ಶುಭಾಶಯ ಕೋರಿದ್ರು. ನಾನು ಅವರ ಮೊಮ್ಮಗನ ಆರತಕ್ಷತೆ ಹೋಗಿಬಂದೆ. ಸ್ನೇಹ, ವಿಶ್ವಾಸ, ರಾಜಕೀಯ ಎಲ್ಲವೂ ಬೇರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ರಾಷ್ಟ್ರಭಕ್ತರ ಬಳಗಕ್ಕೆ ಹಲವರನ್ನು ಸ್ವಾಗತಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣ ದೂರವಾಗುವವರೆಗೂ ನಾನು ಬಿಜೆಪಿಗೆ ಹೋಗಲ್ಲ. ಬಿಜೆಪಿಗೆ ಹಿಂದುತ್ವ ಮರೆತೇ ಹೋಗಿದೆ. ನಾನು ಹಿಂದುತ್ವಕ್ಕಾಗಿ ಹೋರಾಡುತ್ತೇನೆ. ಅದು ಬಿಜೆಪಿ ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ಮನದಟ್ಟಾಗುತ್ತದೆ. ಇಂದಲ್ಲ, ನಾಳೆ ಬಿಜೆಪಿ ಶುದ್ಧೀಕರಣವಾಗುತ್ತೆ. ಅಲ್ಲಿಯವರೆಗೂ ನಾನು ಬಿಜೆಪಿಗೆ ಹೋಗಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಶಿವಮೊಗ್ಗ ಪಾಲಿಕೆಗೆ ಯಾವಾಗ ಚುನಾವಣೆ ನಡೆದರೂ ರಾಷ್ಟ್ರಭಕ್ತರ ಬಳಗದಿಂದ 35 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ನಮಗೆ ಬಹುಮತ ಸಿಗಲಿದೆ ಎಂದು ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಗಾಗಿ ನಮ್ಮ ಕಾರ್ಯಕರ್ತರು ಮತ ಚಲಾಯಿಸಿದ್ದಾರೆ. ಆದರೆ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರಭಕ್ತರ ಬಳಗವನ್ನು ಬೆಂಬಲಿಸುವುದಾಗಿ ಕಾರ್ಯಕರ್ತರು ಭರವಸೆ ನೀಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net