ಬಿಜೆಪಿ ಜಿಲ್ಲಾ ವತಿಯಿಂದ ಬಿ. ಎಸ್​. ಯಡಿಯೂರಪ್ಪ ಅವರ 81 ನೇ ಹುಟ್ಟು ಹಬ್ಬ ಆಚರಣೆ

28GDG05
ಗದಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪುಟ್ಟರಾಜ ಕವಿ ಗವಾಯಿಗಳವರ ಮಠದಲ್ಲಿ ಮಾಜಿ ಸಿಎಂ ಬಿಎಸ್​ಯಡಿಯೂರಪ್ಪ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಅನಿಲ ಅಬ್ಬಿಗೇರಿ, ಎಂ.ಎಸ್​.ಕರೀಗೌಡ್ರ, ಶೇಖರ ಸಜ್ಜನರ, ಉಷಾ ದಾಸರ, ಸುನಂದಾ ಬಾಕಳೆ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಬಿಜೆಪಿ ವತಿಯಿಂದ ಮಂಗಳವಾರ ಬಿ.ಎಸ್​.ಯಡಿಯೂರಪ್ಪನವರ 81 ನೇ ಜನ್ಮ ದಿನವನ್ನು ನಗರದ ಪಂ.ಪುಟ್ಟರಾಜ ಕವಿಗವಾಯಿಗಳವರ ಮಠದಲ್ಲಿ ಗದ್ದುಗೆಗಳಿಗೆ ಅಭಿಷೇಕ, ಪೂಜೆ ಹಾಗು ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು.
ನಗರದ ಬಿಜೆಪಿ ಅಧ್ಯ ಅನೀಲ ಅಬ್ಬಿಗೇರಿ ಮಾತನಾಡಿ, ಯಡಿಯೂರಪ್ಪನವರು ಬಿಜೆಪಿಯನ್ನು ಕರ್ನಾಟಕದಲ್ಲಿ ತಳಮಟ್ಟದಿಂದ ಪ ಸಂಟನೆಯನ್ನು ಮಾಡಿರುವ ದಿಮಂತ ನಾಯಕ. ರೈತರ ಏಳಿಗೆಗೆ ಶ್ರಮಿಸಿದ ಮುಖ್ಯಮಂತ್ರಿ ಹಾಗು ಕೇವಲ 4 ವಿಧಾನಸಭಾ ಸದಸ್ಯರಿದ್ದ ಪಾಟಿರ್ಯನ್ನು ಸರ್ಕಾರ ರಚಿಸುವ ವರೆಗೂ ಶ್ರಮಿಸಿ 4 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಗ್ರಗಣ್ಯ ನಾಯಕರಾಗಿದ್ದಾರೆ. ಎಲ್ಲ ರಾಜಕೀಯ ನಾಯಕರಿಗೂ ಅವರು ಮಾದರಿ ಎಂದರು.
ಎಂ.ಎಸ್​.ಕರೀಗೌಡ್ರ ಹಾಗು ಶೇಖರ ಸಜ್ಜನರ ಅವರು ಬಿ.ಎಸ್​.ಯಡಿಯೂರಪ್ಪನವರ ಹಳೆಯ ಒಡನಾಟವನ್ನು ಹಂಚಿಕೊಂಡರು. ನಗರಸಭೆಯ ಅಧ್ಯೆ ಉಷಾ ದಾಸರ, ಉಪಾಧ್ಯೆ ಸುನಂದಾ ಬಾಕಳೆ, ಸುಧೀರ ಕಾಟಿಗರ, ಯೋಗೇಶ್ವರಿ ಸಂತೋಷ ಅಕ್ಕಿ, ಮಂಜುನಾಥ ಶಾಂತಗೇರಿ, ನಾಗರಾಜ ತಳವಾರ, ಅಶೋಕ ಸಂಕಣ್ಣವರ, ಕೆ.ಪಿ.ಕೋಟಿಗೌಡ್ರ, ಅಯ್ಯಪ್ಪ ಅಂಗಡಿ, ಶಶಿಧರ ದಿಂಡೂರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net