

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬುಧವಾರ ಒಂದೇ ದಿನ 9 ಸಾವಿರ ಕೆ.ಜಿ. ಏಕ ಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು 7.38 ಲಕ್ಷ ರೂ. ದಂಡ ವಸೂಲಿ ಮಾಡುವಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ಸಫಲವಾಗಿದೆ.
ನಗರದಾದ್ಯಂತ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದರೂ, ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿರುವ ಹಿನ್ನೆಲೆ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳ ತಂಡವು ಉತ್ಪಾದಕರು ಹಾಗೂ ದಾಸ್ತಾನುದಾರರ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ.
ಒಟ್ಟಾರೆಯಾಗಿ 158 ಪ್ರಕರಣಗಳಿಂದ 9,567 ಕೆ.ಜಿ. ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು 7.38 ಲಕ್ಷ ರೂ. ದಂಡದ ಮೊತ್ತವನ್ನು ವಸೂಲಿ ಮಾಡಲಾಗಿದೆ. ಜತೆಗೆ ಆ ಮಾರಾಟಗಾರರಿಗೆ ಮತ್ತೆ ತಪ್ಪು ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ನಿಗಮದ ಸಿಇಒ ಕರೀಗೌಡ ತಿಳಿಸಿದ್ದಾರೆ.
ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆ ವಿವರ:
ಜಪ್ತಿ ಮಾಡಿದ ಸ್ಥಳ ಪ್ರಕರಣ ವಶ ದಂಡ (ರೂ.ಗಳಲ್ಲಿ)
ಕೆ.ಆರ್.ಮಾರುಕಟ್ಟೆ (ಎ ಬ್ಲಾಕ್) 3 29 ಕೆ.ಜಿ. 30,000
ಕೆ.ಆರ್.ಮಾರುಕಟ್ಟೆ (ಸಿ ಬ್ಲಾಕ್) 22 6,310 ಕೆ.ಜಿ. 3,500
ಅವಿನ್ಯೂ ರಸ್ತೆ 17 300 ಕೆ.ಜಿ. 40,000
ಕಲಾಸಿಪಾಳ್ಯ 24 150 ಕೆ.ಜಿ. 45,900
ಯಶವಂತಪುರ ಮಾರುಕಟ್ಟೆ 27 110 ಕೆ.ಜಿ. 61,800
ಪೀಣ್ಯ ಕೈಗಾರಿಕಾ ಪ್ರದೇಶ 27 450 ಕೆ.ಜಿ. 1,00,500
ದಾಸರಹಳ್ಳಿ (ಕೈಗಾರಿಕೆ) 1 218 ಕೆ.ಜಿ. 50,000
ಚಾಮರಾಜಪೇಟೆ 37 2,000 ಕೆ.ಜಿ. 4,07,000
ಒಟ್ಟು 158 9,567 7,38,700