ಕುಂದಾಪುರ: ಭಾರತೀಯ ಸಂಚಾರ ನಿಗಮ ಉದ್ಯೋಗಿಗಳ ಸಂಘಟನೆ ಮತ್ತು ಬಿಎಸ್‌ಎನ್‌ಎಲ್, ಡಿಒಟಿ ಪೆನ್ಷನರ್ಸ್ ಅಸೋಸಿಯೇಷನ್‌ಗಳ ಸಮಾವೇಶ ಕುಂದಾಪುರ ದೂರವಾಣಿ ಕೇಂದ್ರದಲ್ಲಿ ಬುಧವಾರ ನಡೆಯಿತು.
ಬಿಎಸ್‌ಎನ್‌ಎಲ್ ಇಯು ಜಿಲ್ಲಾ ಅಧ್ಯಕ್ಷ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಎಜಿಎಲ್ ಹಾಗೂ ವಲಯಾಧ್ಯಕ್ಷ ಸಿ.ಕೆ. ಗುಂಡಣ್ಣ ಹಾಗೂ ಕರ್ನಾಟಕ ವಲಯದ ಕಾರ್ಯದರ್ಶಿ ಸುದರ್ಶನ್ ಅವರು ವೇತನ ಪರಿಷ್ಕರಣೆ ಹಾಗೂ ಪೆನ್ಷನ್ ಪರಿಷ್ಕರಣೆ ಕುರಿತು ನಡೆಯುತ್ತಿರುವ ಅಪಪ್ರಚಾರದ ಕುರಿತು ಸದಸ್ಯರಿಗೆ ತಿಳಿವಳಿಕೆ ನೀಡಿದರು.
ಲ್ಲಾ ಕಾರ್ಯದರ್ಶಿ ಬಿ.ಪಿ.ನಾರಾಯಣ ಜಿಲ್ಲಾ ಸಂಘಟನೆಯ ಆಗು ಹೋಗುಗಳ ಕುರಿತು ಮಾತನಾಡಿದರು. ಸದಸ್ಯರಾದ ತೋಮಸ್ ಮತ್ತು ರವೀಂದ್ರ ಉಪಸ್ಥಿತರಿದ್ದರು. ಕಾರ್ಯದರ್ಶಿ ತನ್ವೀರ್ ಪಾಷಾ ಸ್ವಾಗತಿಸಿ, ಕುಂದಾಪುರ ಶಾಖಾ ಕಾರ್ಯದರ್ಶಿ ಕುಮಾರನ್ ವಂದಿಸಿದರು.