ಬಿಎಸ್‌ಎನ್‌ಎಲ್‌ನಿಂದ ಶೀಘ್ರದಲ್ಲಿ 4ಜಿ ನೆಟ್‌ವರ್ಕ್ ಸೇವೆ ಆರಂಭ: ಧನಂಜಯಕುಮಾರ ತ್ರಿಪಾಠಿ

IMG-20240130-WA0005
Published on

ಗದಗ: ಜಿಲ್ಲೆಯಲ್ಲಿ ಈಗಾಗಲೇ ಸ್ವದೇಶದಲ್ಲಿ ಅಭಿವೃದ್ಧಿಪಡಿಸಲಾಗಿರುವ ತಂತ್ರಜ್ಞಾನ ಹೊಂದಿದ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಆರಂಭಿಸಲು ಪೂರಕ ಕೆಲಸಗಳು ನಡೆಯುತ್ತಿದ್ದು, ಕೆಲವೇ ತಿಂಗಳುಗಳಲ್ಲಿ 4ಜಿ ನೆಟ್‌ವರ್ಕ ಸೇವೆ ಕಾರ್ಯಾರಂಭಗೊಳ್ಳಲಿದೆ ಎಂದು ಬಿಎಸ್‌ಎನ್‌ಎಲ್ ಹುಬ್ಬಳ್ಳಿ ವಿಭಾಗದ ಜನರಲ್ ಮ್ಯಾನೇಜರ್ ಧನಂಜಯಕುಮಾರ ತ್ರಿಪಾಠಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಖಾಸಗಿ ಕಂಪನಿಯ ನೆಟ್‌ವರ್ಕ್ ಸೌಲಭ್ಯಗಳಿಲ್ಲದ ಪ್ರದೇಶಗಳನ್ನು ಗುರುತಿಸಿ ಬಿಎಸ್‌ಎನ್‌ಎಲ್ ಸೇವೆ ತಲುಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಳ್ಳಿ, ಗದಗ ತಾಲೂಕಿನ ಕಬಲಾಯತಕಟ್ಟಿ, ಗಜೇಂದ್ರಗಡದ ಹೊಸರಾಂಪೂರ, ಲಕ್ಷೆö್ಮÃಶ್ವರ ರಾಮಗಿರಿ ಬಳಿಯ ಬಸಾಪೂರ ಗ್ರಾಮದಲ್ಲಿ ಸೈಟ್ ವರ್ಕ್ ನಡೆಯುತ್ತಿದೆ ಎಂದರು. 

ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಆಪ್ಟಿಕಲ್ ಫೈಬರ್ ಮೂಲಕ ಗ್ರಾಹಕರಿಗೆ ಹೊರೆಯಾಗದಂತೆ ಕಡಿಮೆ ಟ್ಯಾರಿಫ್ ದರದಲ್ಲಿ ಇಂಟರ್‌ನೆಟ್ ಸೌಲಭ್ಯ ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸಲು ಮತ್ತು ನಿರ್ವಹಿಸಲು ಕಮಿಷನ್ ಆಧಾರದ ಮೇಲೆ ಫೈಬರ್ ಟು ದಿ ಹೋಮ್(ಎಫ್‌ಟಿಟಿಚ್) ಪಾಲುದಾರರದನ್ನು ನೇಮಕ ಮಾಡಿಕೊಳ್ಳುತ್ತಿದೆ. ಪಾಲುದಾರರಾಗಲು ಯಾವುದೇ ಸ್ಟಾರ್ಟಪ್‌ಗಳು, ಬಿಲ್ಡರ್‌ಗಳು, ಉದ್ಯಮಿಗಳು ಹಾಗೂ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು. 

ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿರುವ ಗ್ರಾಹಕರ ಮರುಸ್ಥಾಪನೆಗೆ ವಿಶೇಷ ಗ್ರಾಮೀಣ ಯೋಜನೆಯನ್ನು ಲಾಂಚ್ ಮಾಡಲಾಗಿದ್ದು, ಅನಿಯಮಿತ ಡಾಟಾ ಮತ್ತು ಅನಿಯಮಿತ ಕರೆಗಳು, ಶಶೂನ್ಯ ಭದ್ರತಾ ಠೇವಣಿ ಮತ್ತು ಯಾವುದೇ ಅನುಸ್ಥಾಪನಾ ಶುಲ್ಕಗಳಿಲ್ಲದೇ ಸೇವೆ ಒದಗಿಸಲಾಗುತ್ತಿದೆ. ಈಗಾಗಲೇ ಗದಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪಾಲುದಾರರನ್ನು ನೇಂಕ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಜಿಲ್ಲಾದ್ಯಂತ 4ಜಿ ನೆಟ್‌ವರ್ಕ್ ಸೇವೆ ಕಾರ್ಯಾರಂಭಗೊಳ್ಳಲಿದೆ. ಜೊತೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ 5ಜಿ ನೆಟ್‌ವರ್ಕ್ಗೂ ಬದಲಾವಣೆಯಾಗಲಿದೆ ಎಂದು ವಿವರಿಸಿದರು. 

ಸಹಾಯಕ ಜನರಲ್ ಮ್ಯಾನೇಜರ್ ಹುಚ್ಚಪ್ಪ ಶಿರಹಟ್ಟಿ ಮಾತನಾಡಿ, ಬಿಎಸ್‌ಎನ್‌ಎಲ್ 4ಜಿ ಸೇವೆ ಆರಂಭಿಸಲು ಆಸಕ್ತರಿರುವ ಗ್ರಾಹಕರು ಬಿಎಸ್‌ಎನ್‌ಎಲ್ ಸಂಬAಧಿತ ಸೇವೆಗಳ ಮಾಹಿತಿ ಪಡೆಯಲು 1800-4444 ನಂಬರ್ ಬಳಸಿಕೊಂಡು ವಾಟ್ಸಾಪ್ ಮೆಸೆಜ್ ಮೂಲಕ ಸಂಪರ್ಕಿಸಬಹುದು. ಮೊಬೈಲ್ ಮೂಲಕವೇ ಬಿಎಸ್‌ಎನ್‌ಎಲ್ ಸೇವೆಗಳ ಮಾಹಿತಿ ನೀಡಲಾಗುವುದು ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಗದಗ ಗ್ರಾಮೀಣ ಎಸ್‌ಡಿಒಪಿ ಮೆಹಬೂಬ್ ಅಮರಗೋಳ, ಭಗತ್‌ಸಿಂಗ್ ಬಿ., ಶಂಕನಾಥ ಗೌಡ ಸೇರಿ ಬಿಎಸ್‌ಎನ್‌ಎಲ್ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net