ಬಿಎಸ್‌ವೈ, ಷಾ ಶೀಘ್ರ ಚೇತರಿಸಿಕೊಳ್ಳಲಿ: ಶ್ರೀ ಶಿವಮೂರ್ತಿ ಮುರುಘಾ ಶರಣರು

MURUGA SWAMIJI
Published on

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಮಂತ್ರಿ ಅಮಿತ್ ಷಾ ಸೇರಿ ಸಚಿವರು, ಸಂಸದರ ಸಹಿತ ಅನೇಕರು ಕರೊನಾ ಸೋಂಕಿತರಾಗಿದ್ದು, ಶೀಘ್ರ ಇವರೆಲ್ಲರೂ ಚೇತರಿಸಿಕೊಂಡು ಜನಸೇವೆಗೆ ಮುಂದಾಗಲಿ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹಾರೈಸಿದ್ದಾರೆ.

ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಸಿ.ಎಂ.ಯಡಿಯೂರಪ್ಪ ಶೀಘ್ರ ಗುಣಮುಖರಾಗಲಿ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಚಿತ್ರದುರ್ಗ ಪ್ರವಾಸದಲ್ಲಿದ್ದ ಆಹಾರ ಸಚಿವ ಕೆ.ಗೋಪಾಲಯ್ಯ ಶುಭ ಹಾರೈಸಿದ್ದಾರೆ.

ಜೆಡಿಎಸ್: ಸಂಪುಟದಲ್ಲಿ ಸಮನ್ವಯ ಕೊರತೆ ಇದ್ದರೂ ಯಡಿಯೂರಪ್ಪ ಸರಿದೂಗಿಸಿಕೊಂಡು ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಇವರು ಶೀಘ್ರ ಚೇತರಿಸಿಕೊಂಡು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಜೆಡಿಎಸ್ ಯುವ ಜಿಲ್ಲಾಧ್ಯಕ್ಷ ಓ.ಪ್ರತಾಪ್ ಜೋಗಿ ಪ್ರಾರ್ಥಿಸಿದ್ದಾರೆ.

ದೇವಸ್ಥಾನದಲ್ಲಿ ಪೂಜೆ: ಯಡಿಯೂರಪ್ಪ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಚಿತ್ರದುರ್ಗದ ಯಡಿಯೂರಪ್ಪ ಅಭಿಮಾನಿ ಬಳಗದ ಸದಸ್ಯರು ಸೋಮವಾರ ನಗರದ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಮುಖಂಡರಾದ ಜಿತೇಂದ್ರ ಎನ್.ಹುಲಿಕುಂಟೆ, ಮಂಜುನಾಥ, ಗಗನ್ ಪಟೇಲ್, ವಿಜಯ್ಶೆಟ್ಟಿ, ಪರಮೇಶ್ ಹಾಗೂ ಮತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net