

ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್.ಕೃಷ್ಣಯ್ಯ ಅವರು ಅವಿರೋಧವಾಗಿ ಆಯ್ಕೆಯಾದರು.
ಎಂ.ಎಚ್.ಜೀವನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಘದ ಸಭಾಂಗಣದಲ್ಲಿ ಶುಕ್ರವಾರ ಬಿ.ಎಸ್.ಕೃಷ್ಣಯ್ಯ ಹೊರತುಪಡಿಸಿ ಬೇರು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಯು.ಕೆ. ಪಾರ್ವತಮ್ಮ ಘೋಷಿಸಿದರು. ಸಂಘ ಉಪಾಧ್ಯಕ್ಷ ಡಿ.ರೇವಣ್ಣ, ನಿರ್ದೇಶಕರಾದ ಎಂ.ಎಚ್.ಜೀವನ್, ಕೆ.ಎಂ.ಪದ್ಮನಾಭ, ಕೆ.ಬಿ. ಶಂಕರಯ್ಯ, ಬಿ.ಎಸ್.ಹರಿಪ್ರಸಾದ್, ಗೀತಾ, ಎಚ್.ಸಿ.ವಿಜಯಶಂಕರ್, ಎಚ್.ಎಸ್.ಸುನೀಲ್‌ಕುಮಾರ್, ಬಿ.ಎಸ್.ಕೃಷ್ಣಯ್ಯ, ಎನ್.ನಿಂಗರಾಜು, ಎ.ರವಿಕಾಂತ, ಎಸ್.ಎನ್.ಹರೀಶ್, ಸಿಇಒ ಕೆ.ಸುಮಿತ್ರಾ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜಮೂರ್ತಿ, ಎಂ.ಎಸ್.ಲೋಕೇಶ್, ಬಾಬು, ಎಂ.ಆರ್.ಕಾಳೇಗೌಡ, ಮುಖಂಡರಾದ ಮರಳಿಗಸ್ವಾಮಿ, ಹೆಗಡೆ ಕೆಂಚಪ್ಪ, ಶ್ರೀನಿವಾಸ, ಧರಣೇಶ, ಮಲ್ಲಿಕಾ ಶಿವಪ್ಪ, ಸುಧಾಕರ, ಹನುಮಂತ, ವಾಸು, ಅನಿಲ್, ಪರ್ವತಪ್ಪ, ಎಂ.ಬಿ.ರಮೇಶ್ ಇದ್ದರು.