ಜಿಲ್ಲೆಯಲ್ಲಿ ಯುವಕರಿಬ್ಬರ ಬರ್ಬರ ಕೊಲೆ

Vector illustration in HD very easy to make edits.
Vector illustration in HD very easy to make edits.
Published on

ಯರಗಟ್ಟಿ/ಹುಕ್ಕೇರಿ: ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ನಡೆದ ಪ್ರತ್ಯೇಕ ಟನೆಯಲ್ಲಿ ಇಬ್ಬರು ಯುವಕರನ್ನುಕೊಲೆ ಮಾಡಲಾಗಿದೆ.

ಯರಗಟ್ಟಿ ಪಟ್ಟಣದ ಜಮೀನಿನೊಂದರಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಇನ್ನೊಂದು ಪೀಸ್​ ಚಿಕನ್​ ನೀಡು ಎಂದು ಕೇಳಿದ್ದಕ್ಕೆ ವಿನೋದ ಚಂದ್ರಶೇಖರ ಮಲಶೆಟ್ಟಿ (25) ಎಂಬಾತನನ್ನು ಆರೋಪಿ ವಿಠ್ಠಲ ಮುದಕಪ್ಪ ಹಾರೂಗೊಪ್ಪ (28) ಕೊಲೆ ಮಾಡಿದ್ದಾನೆ. ಇಬ್ಬರ ಮಧ್ಯೆ ಹಣಕಾಸಿನ ವಿಷಯವಾಗಿ ವೈಷಮ್ಯವಿತ್ತು ಎನ್ನಲಾಗಿದೆ. ಅಭಿಷೇಕ ಕೊಪ್ಪದ ಅವರ ಮದುವೆ ಪಾರ್ಟಿಗಾಗಿ ಭಾನುವಾರ ಗುಂಡು ಮಿಕಲಿ ಅವರ ಹೊಲದಲ್ಲಿ ರಾತ್ರಿ ಊಟದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಊಟದ ವೇಳೆ ಇನ್ನಷ್ಟು ಚಿಕನ್​ ನೀಡಲು ವಿನೋದ ಮಲಶೆಟ್ಟಿ ಕೇಳಿದ್ದಾನೆ. ಇದೇ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ವಿಠ್ಠಲ ಹಾರೂಗೊಪ್ಪ ವಿನೋದನ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮುರಗೋಡ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಕಲ್ಲಿನಿಂದ ಜಜ್ಜಿ ಹತ್ಯೆ:

ಹುಕ್ಕೇರಿ ತಾಲೂಕಿನ ಕಣಗಲಾ ಸರ್ಕಾರಿ ಆಸ್ಪತ್ರೆ ಬಳಿ ಗಲಾಟೆ ನಡೆದ ಸಂದರ್ಭದಲ್ಲಿ ಕೊಲ್ಲಾಪುರ ಜಿಲ್ಲೆಯ ಕಾಪಸಿ ಪಟ್ಟಣದ ನಿವಾಸಿ ದೇವಾನಿ ಉರ್ ಆನಂದ ಡುಕ್ರಿ (20) ಎಂಬಾತನನ್ನು ಕಿಶನ್​ ವಿಶಾಲ ಮಾಳಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಕೊಲೆಯಾದ ಯುವಕ ಮತ್ತು ಆರೋಪಿ ಇಬ್ಬರೂ ಭಾನುವಾರ ಕಣಗಲಾ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ಜಮೀನಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಂಕೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net