ಮನೆಗೆ ನುಗ್ಗಿ ವ್ಯಕ್ತಿಯ ಭೀಕರ ಹತ್ಯೆ

3 Dwd 7 (Girish Karadigudda)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮನೆಗೆ ನುಗ್ಗಿದ ತಂಡ ವ್ಯಕ್ತಿಯೊಬ್ಬನನ್ನುಮಾರಕಾಸ್ತ್ರಗಳಿಂದ ಥಳಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಗಿರೀಶ ಕರಡಿಗುಡ್ಡ (43) ಕೊಲೆಯಾದ ವ್ಯಕ್ತಿ. ಈತ ಮನೆಯಲ್ಲಿದ್ದ ವೇಳೆ ನುಗ್ಗಿದ ಕೆಲವರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆಗೆ ಹಳೇ ವೈಷಮ್ಯ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಡಿವೈಎಸ್‌ಪಿ ನಾರಾಯಣ ಬರಮನಿ, ಸಿಪಿಐ ಸಮೀರ ಮುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net