ಕಬ್ಬಿನ ಗದ್ದೆಯಲ್ಲಿ ಬರ್ಬರ ಹತ್ಯೆ

20Kagavad1 CRIME
Published on

ಕಾಗವಾಡ: ತಾಲೂಕಿನ ಶೇಡಬಾಳ ಪಟ್ಟಣದ ಕಬ್ಬಿನ ಗದ್ದೆಯಲ್ಲಿ ಸ್ಥಳಿಯ ನಿವಾಸಿ ಶಶಿಕಾಂತ ಕೃಷ್ಣ ಹೊನಕಾಂಬಳೆ (55)ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಟನೆ ಭಾನುವಾರ ಬೆಳಕಿಗೆ ಬಂದಿದೆ. ಶೇಡಬಾಳ ಪಟ್ಟಣದ ರಾವಸಾಹೇಬ ಪಾಟೀಲ ಅವರ ಕಬ್ಬಿನ ಗದ್ದೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತನ ಮುಖದ ಮೇಲೆ ಜಜ್ಜಿದ ಕಲೆಗಳು ಇದ್ದು, ಕೊಲೆಯ ಶಂಕೆ ಇದೆ ಎಂದು ಪ್ರಕರಣ ದಾಖಲಿಸಿಕೊಂಡ ಕಾಗವಾಡ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರಿಗೆ ಯೋಧ ಸೇರಿ ಇಬ್ಬರು ಪುತ್ರರಿದ್ದಾರೆ. ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಎಸ್​ಪಿ ಶೃತಿ ಎನ್​.ಎಸ್​., ಡಿವೈಎಸ್​ಪಿ, ಸಿಪಿಐ ಹಾಗೂ ಕಾಗವಾಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net