ಬಿಆರ್ ಟಿಎಸ್ ನೌಕರರಿಗೆ ತರಬೇತಿ

IMG_7029-1.jpg
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಸ್ಟಡಿಸ್ ಮತ್ತು ರೀಸರ್ಚ್ ನಲ್ಲಿ ಗುರುವಾರ ಹುಬ್ಬಳ್ಳಿ ಧಾರವಾಡ ತ್ವರಿತ ಬಸ್ ಸಂಚಾರ ವ್ಯವಸ್ಥೆಯ (ಎಚ್ಡಿ ಬಿಆರ್ಟಿಎಸ್) ನೌಕರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎನ್ ಡಬ್ಲ್ಯುಕೆಆರ್ಟಿಸಿ ಆಡಳಿತಾಧಿಕಾರಿ ಗುರುಪ್ರಸಾದ ಹೊಗಾಡಿ ಅವರು ಮಾತನಾಡಿ, ಉದ್ಯೋಗಿಗಳ ಕೌಶಲ ಮತ್ತು ಜ್ಞಾನ ಹೆಚ್ಚಿಸುವಲ್ಲಿ ತರಬೇತಿಯು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಮಾತನಾಡಿ, ನೌಕರರ ಸಮಸ್ಯೆಗಳನ್ನು ಪರಿಹರಿಸಲು ತರಬೇತಿ ವಿನ್ಯಾಸಗೊಳಿಸಲಾಗಿತ್ತು ಎಂದರು.

ಸಂಪನ್ಮೂಲ ವ್ಯಕ್ತಿ ಡಾ. ನಾಗರಾಜ ನವಲಗುಂದ ಅವರು, ಉತ್ತಮ ಗ್ರಾಹಕ ಸೇವಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಯಾಣಿಕರ ಕುಂದುಕೊರತೆ ಪರಿಹಾರ ಕುರಿತು ವಿವರಿಸಿದರು.

ಡಾ. ಮೃತ್ಯುಂಜಯ ಚವಣ್ಣವರ ಅವರು, ವೈಯಕ್ತಿಕ ಹಣಕಾಸು ನಿರ್ವಹಣೆ ಬಗ್ಗೆ, ಡಾ. ಜಿ.ಎಸ್. ಹಿರೇಮಠ ಮತ್ತು ಡಾ. ಸುವರ್ಣ ನಿಂಬಗಲ್ ಅವರು, ಕೆಲಸದ ಸ್ಥಳದಲ್ಲಿ ವೃತ್ತಿಪರ ನಡವಳಿಕೆ ನಿಮಿರ್ಸುವುದು ಮತ್ತು ಒತ್ತಡ ನಿರ್ವಹಣೆ ಕುರಿತು ಮಾತನಾಡಿದರು.

ಅಧಿಕಾರಿಗಳಾದ ರಾಜ್ಕುಮಾರ್ ಜಿ.ಎಂ., ಮಂಜುನಾಥ ಜೆ., ಸಂತೋಷ ಕಾಮತ್,- ರವಿ ಅಂಚಿಗಾವಿ, ಇತರರು ಉಪಸ್ಥಿತರಿದ್ದರು.

ಪ್ರೊ. ರಶ್ಮಿ ಎಸ್. ಸ್ವಾಗತಿಸಿದರು. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಡಾ. ಎಂ.ಆರ್. ಶೋಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರಿಸ್ಟಿನಾ ಜೆ. ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಆರ್.ಸಿ. ಪಾಟೀಲ್ ಮತ್ತು ಪ್ರೊ. ಕಿರಣ ತರಬೇತಿ ಸಂಯೋಜಿಸಿದರು. ಪ್ರೊ. ಕಿರಣಕುಮಾರ ಬಾಳಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net