ಬಿಆರ್‌ಟಿಎಸ್ ಅವಾಂತರಕ್ಕೆ ರಸ್ತೆ ಜಲಾವೃತ

web 2
Published on

ಧಾರವಾಡ: ನಗರದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಬಿಆರ್‌ಟಿಎಸ್ ಅವಾಂತರ ಮತ್ತೊಮ್ಮೆ ಗೋಚರಿಸಿತು. ಇಲ್ಲಿನ ಎನ್‌ಟಿಟಿಎಫ್ ಬಳಿಯ ಗಣೇಶ ದೇವಸ್ಥಾನ ಎದುರಿನ ರಸ್ತೆ ಗಂಟೆಗಟ್ಟಲೇ ಜಲಾವೃತವಾಗಿತ್ತು. ಬಿಆರ್‌ಟಿಎಸ್ ಕಾರಿಡಾರ್ ಹಾಗೂ ಸಾರ್ವಜನಿಕ ವಾಹನಗಳು ಸಂಚರಿಸುವ ಪಥಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮಳೆ ನೀರು ಹರಿದುಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಅವಾಂತರಕ್ಕೆ ಕಾರಣವಾಯಿತು. ಇದರಿಂದ ವಾಹನಗಳ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net