ಹುಬ್ಬಳ್ಳಿ: ಇಲ್ಲಿಯ ಬಿಆರ್ ಟಿಎಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಹೆಚ್ಚುವರಿ ಪ್ರಭಾರ ತೆಗೆದುಕೊಂಡ ವಾಯವ್ಯ ಸಾರಿಗೆ ಸಂಸ್ಥೆ ಎಂಡಿ ಪ್ರಿಯಾಂಗಾ ಎಂ. ಅವರು ಬುಧವಾರ ಬಿಆರ್ ಟಿಎಸ್ ಕಾರಿಡಾರ್ ಗೆ ಭೇಟಿ ನೀಡಿದರು.
ಚಿಗರಿ ಬಸ್ ಹಾಗೂ ಕಾರಿಡಾರ್ ನಲ್ಲಿನ ಸಮಸ್ಯೆಗಳನ್ನು ವೀಕ್ಷಣೆ ಮಾಡಿ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.