ಚಿಗರಿ ಬಸ್ ನಿಲ್ದಾಣ ಸ್ಥಳಾಂತರ

IMG_20240315_205446_824.jpg
Published on

ಹುಬ್ಬಳ್ಳಿ: ನಗರದಲ್ಲಿ ನಡೆದಿರುವ ಪ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿಯ ಹಳೇ ಬಸ್ ನಿಲ್ದಾಣ ಎದುರಿನ ರಾಣಿ ಚನ್ನಮ್ಮ ಚಿಗರಿ ನಿಲ್ದಾಣವನ್ನು ಬಸವ ವನ ಬಳಿಯ ಸುಜಾತಾ ಥೇಟರ್ ಎದುರು ಸ್ಥಳಾಂತರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ -218ರ ಮೇಲ್ಸೇತುವೆ ಕಾಮಗಾರಿಯು ಪ್ರಗತಿಯಲ್ಲಿದೆ. ಈ ಫ್ಲೈಓವರ್ ಹಳೇ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ಹೋಗುತ್ತದೆ. ಹಾಗಾಗಿ ಮಧ್ಯದಲ್ಲಿ ಬರುವ ಬಿಆರ್ಟಿಎಸ್ ಚಿಗರಿ ಬಸ್ ನಿಲ್ದಾಣ ಸ್ಥಳಾಂತರ ಅನಿವಾರ್ಯವಾಗಿದೆ.

ಮಾರ್ಚ್ 17ರ ಬೆಳಗ್ಗೆ 6ಗಂಟೆಯಿಂದ ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗುವವರೆಗೆ ಚಿಗರಿ ಬಸ್ ಗಳನ್ನು ತಾತ್ಕಾಲಿಕವಾಗಿ ಬಸವ ವನ ಬಳಿ ನಿಮಿರ್ಸಿದ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸಲಾಗುವುದು.

ರಾಣಿ ಚನ್ನಮ್ಮ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಾತ್ಕಾಲಿಕ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಎಂದು ಎಚ್ಡಿ ಬಿಆರ್ಟಿಎಸ್ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net