

ಶಿವಮೊಗ್ಗ: ಭದ್ರಾವತಿ ತಾಲೂಕಿನ ಬಿಆರ್‌ಪಿಗೆ ತೆರಳಿದ್ದ ಪ್ರೇಮಿಗಳಿಬ್ಬರನ್ನು ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು 3.65 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿ ತಾರಿಕಟ್ಟೆ ಗ್ರಾಮದ ಸತ್ಯಾನಂದ ಅಲಿಯಾಸ್ ಸ್ನೇಕ್ ಸತ್ಯ (22), ಮೂಲೆಕಟ್ಟೆ ಗ್ರಾಮದ ಟಿ.ಬಾಬು ಅಲಿಯಾಸ್ ಜೋಶ್ವಾ (19) ಮತ್ತು ಬೆಂಗಳೂರು ಜಾಲಹಳ್ಳಿ ಗ್ರಾಸ್‌ನ ವೆಂಕಟೇಶ್ ಅಲಿಯಾಸ್ ಖರಾಬ್ ಬೆಳ್ಳಿ (22) ಬಂಧಿತರು.
ಆರೋಪಿಗಳು ಭದ್ರಾವತಿ ಗ್ರಾಮಾಂತರ ಠಾಣೆಯ ಎರಡು ಮತ್ತು ಪೇಪರ್ ಟೌನ್ ಠಾಣೆ ಒಂದು ಸುಲಿಗೆ ಪ್ರಕರಣ, ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಒಂದು ಸ್ವತ್ತು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದು 36 ಗ್ರಾಂ ಚಿನ್ನಾಭರಣ, 2 ಮೊಬೈಲ್, ಎರಡು ಬೈಕ್‌ಗಳು, ಡ್ರಾೃಗರ್, ಚಾಕುವನ್ನು ಜಪ್ತಿ ಮಾಡಿದ್ದಾರೆ.
ಕಳೆದೊಂದು ತಿಂಗಳ ಹಿಂದೆ ಪ್ರೇಮಿಗಳಿಬ್ಬರು ಬಿಆರ್‌ಪಿಗೆ ತೆರಳಿದ್ದರು. ಈ ವೇಳೆ ಅಡ್ಡಗಟ್ಟಿದ್ದ ಆರೋಪಿಗಳು ಚಿನ್ನಾಭರಣ ಸುಲಿಗೆ ಮಾಡಿದ್ದರು. ಈ ಬಗ್ಗೆ ತಿಂಗಳ ಬಳಿಕ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್, ಪಿಎಸ್‌ಐ ಹಾಗೂ ಸಿಬ್ಬಂದಿಗಳ ತಂಡವನ್ನು ನೇಮಕ ಮಾಡಲಾಗಿತ್ತು.