ಗಾಂಜಾ,ಬ್ರೌನ್‌ಶುಗರ್ ವಶ, ಓರ್ವನ ಸೆರೆ

gaanja
Published on


ಕುಂದಾಪುರ: ಗಾಂಜಾ ಹೊಂದಿದ್ದ ಕಾರವಾರ ಬಿಣಗಾ ನಿವಾಸಿ ಜಾಫರ್ ಗುಡುಮಿಯಾ (28) ಎಂಬಾತನನ್ನು ಕುಂದಾಪುರ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಗುರುವಾರ ರಾತ್ರಿ ಶಾಸ್ತ್ರೀ ವೃತ್ತದ ಬಳಿ ಬಂಧಿಸಿದೆ.
ಆತನಿಂದ 40 ಸಾವಿರ ರೂ. ಮೌಲ್ಯದ 1.810 ಕಿ.ಗ್ರಾಂ ಗಾಂಜಾ, 10 ಸಾವಿರ ಮೌಲ್ಯದ 1ಗ್ರಾಂ ಬ್ರೌನ್‌ಶುಗರ್, 2 ಮೊಬೈಲ್, 1,500 ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಸಿಬ್ಬಂದಿಯೊಂದಿಗೆ ಗುರುವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದಾಗ ನಗರದ ಶಾಸ್ತ್ರೀ ವೃತ್ತದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಆರೋಪಿ ಜಾಫರ್‌ನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಸದ್ಯ ಪ್ರಕರಣವನ್ನು ಕುಂದಾಪುರ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.
ಕ್ರೈಂ ವಿಭಾಗದ ಸಿಬ್ಬಂದಿ ರಾಘವೇಂದ್ರ ಉಪ್ಪುಂದ, ರಾಮು ಹೆಗ್ಡೆ, ವಿಜಯ್ ಕುಮಾರ್, ರಮೇಶ್ ಕುಲಾಲ್, ಕುಂದಾಪುರ ಪೊಲೀಸ್ ಠಾಣೆಯ ರಾಘವೇಂದ್ರ ಮೊಗವೀರ, ವಿಜೇತ್ ಮತ್ತು ಜೀಪು ಚಾಲಕ ರಾಜು ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net