ಸಹೋದರರ ಜಗಳ ಕೊಲೆಯಲ್ಲಿ ಅಂತ್ಯ

Hospet murder case
Published on

ಹುಬ್ಬಳ್ಳಿ: ಸಹೋದರರ ಮಧ್ಯದ ಜಗಳವು ತಾರಕಕ್ಕೆ ಹೋಗಿ ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ತಾಲೂಕಿನ ಮಂಟೂರಿನಲ್ಲಿ ನಡೆದಿದೆ. ಅಂದಾನಪ್ಪ ಹೊನ್ನಾಪುರ (30)ಕೊಲೆಯಾದವ. ಕ್ಷುಲ್ಲಕ ಕಾರಣಕ್ಕೆ ಸಹೋದರ ನಡುವೆ ಜಗಳ ನಡೆದಿದೆ. ಅಣ್ಣ ಮೈಲಾರಪ್ಪ ಕಟ್ಟಿಗೆಯಿಂದ ಹೊಡೆದು ತಮ್ಮನನ್ನು ಕೊಲೆ ಮಾಡಿದ್ದಾನೆ. ಮದ್ಯ ಸೇವನೆ ಮಾಡಿ ಮನೆಗೆ ಬಂದು ಮಾನಸಿಕ ಹಿಂಸೆ ನೀಡುತ್ತಿದ್ದ ಅಂದಾನಪ್ಪನ ಮೇಲೆ ಕೋಪಗೊಂಡು ಅಣ್ಣನೇ ಈ ಕೃತ್ಯ ಎಸಗಿದ್ದಾನೆ. ಕೊಲೆ ನಂತರ ಸಾಕ್ಷಿ ನಾಶಕ್ಕೂ ಯತ್ನಿಸಿದ್ದಾನೆ ಎಂದು ಮಹಾದೇವ ಹೊನ್ನಾಪುರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net