

ಸಂಡೂರು: ದಸರಾವನ್ನು ಇಡೀ ಕರ್ನಾಟಕದಲ್ಲಿಯೇ ಅತ್ಯಂತ ಅದ್ದೂರಿಯಾಗಿ ಆಚರಿಸಿದ ಕೊಡುಗೆ ಅಖಂಡ ಬಳ್ಳಾರಿ ಜಿಲ್ಲೆಗೆ ಸಲ್ಲುತ್ತದೆ. ಹಂಪಿಯ ಮಹಾನವಮಿ ದಿಬ್ಬದಲ್ಲಿ ನಡೆಯುತ್ತಿದ್ದ ದಸರಾ ಹಬ್ಬವನ್ನು ಪ್ರೌಢದೇವರಾಯ, ಶ್ರೀಕೃಷ್ಣದೇವರಾಯರ ಕಾಲಕ್ಕೆ ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು ಎಂದು ಎಂಎಲ್ಸಿ ಸತೀಶ್ ಹೇಳಿದರು.
ಪಟ್ಟಣದ ಲಕ್ಷ್ಮೀಪುರದ ಊರಮ್ಮ ದೇವಿ ದೇವಸ್ಥಾನದ ಬಳಿ 6ನೇ ವಷರ್ದ ನಾಡಹಬ್ಬ ದಸರಾದ ಭವ್ಯ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ವಿಜಯನಗರದ ದಸರಾ ಆಚರಣೆ ಕುರಿತು ಅನೇಕ ವಿದೇಶಿ ಪ್ರವಾಸಿಗರು ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ. ನಂತರ ಮೈಸೂರು ಅರಸರು ಆ ಪರಂಪರೆಯನ್ನು ಮುಂದುವರಿಸಿದರು. ವಿಜಯನಗರ ಅವನತಿಯ ನಂತರ ಹಿಂದೂ ಧರ್ಮದ ರಕ್ಷಣೆಗಾಗಿ ಶಿವಾಜಿ ಮಹಾರಾಜರು ಕೂಡಾ ಹಂಪಿಯಲ್ಲಿ ಬಂದು ನೆಲೆಸುವ ವಾಗ್ದಾನ ಮಾಡಿದ್ದರು.
ಸನಾತನ ಸಂಸ್ಕೃತಿಯಲ್ಲಿ ಯುಗಾದಿ, ಹೋಳಿ ಹಬ್ಬಗಳಂತೆ ದಸರಾ ಹಬ್ಬವು ಸಹೋದರತೆ ಸಹಬಾಳ್ವೆ ಸಂದೇಶ ಸಾರುವ ಹಬ್ಬವಾಗಿದೆ. ಕಾಮ, ಕ್ರೋಧ, ಲೋಭದಂತಹ ಗುಣಗಳನ್ನು ತ್ಯಜಿಸಿ ಬನ್ನಿ ಹಂಚುವ ಮೂಲಕ ಅಣ್ಣ ತಮ್ಮಂದಿರಂತೆ ಬಾಳುವ ಬದುಕಿನ ಪಾಠವನ್ನು ದಸರಾ ನೀಡುತ್ತದೆ ಎಂದರು.
ಮುಖಂಡರಾದ ದರೋಜಿ ರಮೇಶ, ಜೆಸಿಬಿ ರಾಮಕೃಷ್ಣ, ಉಡೇದ ಸುರೇಶ, ಡಿ.ಕಷ್ಣಪ್ಪ, ಪುರುಷೋತ್ತಮ, ಕರಡಿ ಯರ‌್ರಿಸ್ವಾಮಿ, ಡಿ.ಪ್ರಹ್ಲಾದ, ಅಂತಾಪುರ ಶಂಕರ, ಕಿನ್ನೂರೇಶ್ವರ, ವಿಶ್ವನಾಥರೆಡ್ಡಿ, ಹಟ್ಟಿ ಕುಮಾರಸ್ವಾಮಿ, ಪ್ರಭುವನಗೌಡ, ವಿಜಯಕುಮಾರ ಇತರರಿದ್ದರು.