ಪಾಳುಬಿದ್ದ ಮನೆಯಲ್ಲಿ ಅಣ್ಣ&ತಂಗಿ ವಾಸ!

10 PVD 1
ಪಾವಗಡದ ಕಾವಲಗೆರೆ ಬಡಾವಣೆಯಲ್ಲಿ ಪಾಳು ಬಿದ್ದಿರುವ ಮನೆಯಲ್ಲಿ ವಾಸಿಸುತ್ತಿರುವ ರಾಮಾಂಜಿನೇಯ, ಸೀತಾಲಕ್ಷ್ಮೀ
Published on

ಪಾವಗಡ: ಪಾಳುಬಿದ್ದ ಮನೆಯಲ್ಲಿಯೇ ಮೂಲ ಸೌಕರ್ಯ ಇಲ್ಲದೆ ಬೇಸಿಗೆಯಲ್ಲಿ ಬೆಂದು, ಮಳೆಯಲ್ಲಿ ನೆಂದು, ವಿಷ ಜಂತುಗಳ ಕಾಟದಲ್ಲೆ ಅಣ್ಣ&ತಂಗಿ ವಾಸ ಮಾಡುತ್ತಿರುವ ಮನ ಕಲಕುವ ದೃಶ್ಯ ಪಟ್ಟಣದ ಕಾವಲಗೆರೆ ಬಡಾವಣೆಯಲ್ಲಿ ಕಂಡು ಬಂದಿದೆ. ಗುಡಿಸಲುಮುಕ್ತ ರಾಜ್ಯವೆಂಬ ೂಷಣೆ ಹಲವು ದಶಕಗಳಿಂದ ಕೇಳಿಬರುತಿದೆ. ಆದರೆ ಪಟ್ಟಣದ ಕಾವಲಗೆರೆ ಬಡಾವಣೆಯಲ್ಲಿ ವಾಸಕ್ಕೆ ಯೋಗ್ಯವಲ್ಲದ ಪಾಳು ಬಿದ್ದ ಮನೆಯಲ್ಲಿ ಸೌಕರ್ಯಗಳಿಲ್ಲದೆ ಸೀತಾಲಕ್ಷ್ಮೀ(46) ರಾಮಾಂಜನೇಯ (50) ಎಂಬ ಅಣ್ಣ& ತಂಗಿ ವಾಸವಾಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರಿಂದ, ತಾಲೂಕಿನ ಕಡು ಬಡವರಿಗೆ, ನಿರ್ಗತಿಕರಿಗೆ ವಸತಿ ಭಾಗ್ಯ ಯಾವಾಗ ಎಂದು ಶಾಸಕ ಎಚ್​.ವಿ ವೆಂಕಟೇಶ್​ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರದ ವಸತಿ ಯೋಜನೆ ಯಾರಿಗೆ ತಲುಪುತ್ತಿದೆ, ತಾಲೂಕಿನ ಜನಪ್ರತಿನಿಧಿಗಳು, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಏನು ಮಾಡುತ್ತಿದ್ದಾರೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲೇ ಪಾಳುಬಿದ್ದ ಮನೆ. ಆ ಮನೆಯ ಗೋಡೆ ಶಿಥಿಗೊಂಡಿದೆ. ಮಣ್ಣು ಮತ್ತು ಕಲ್ಲು ಕುಸಿದು ಬಿದ್ದಿವೆ. ಅವುಗಳ ನಡುವೆಯೇ ಜೀವನ ಸಾಗಿಸುತ್ತಿದ್ದು, ಬೇಸಿಗೆಯಲ್ಲಿ ನೆರಳಿಲ್ಲದೆ, ಮಳೆಯಲ್ಲಿ ರಕ್ಷಣೆ ಇಲ್ಲದೆ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಯಾವುದೇ ವಸತಿ, ಮೂಲ ಸೌಕರ್ಯ ಯೋಜನೆಗಳು ಇವರಿಗೆ ಮರೀಚಿಕೆಯಾಗಿವೆ."ನಾನು ಬಸ್​ ಕ್ಲೀನರ್​ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ತಂಗಿಯನ್ನು ಸಾಕುತ್ತಿದ್ದೇನೆ. ನನಗೊಂದು ವಸತಿ ಸೌಲಭ್ಯ ಕಲ್ಪಿಸಿಕೊಡಿ. ಸೂರಿನ ವ್ಯವಸ್ಥೆ ಇಲ್ಲದೆ ಹಾವು, ಚೇಳು ವಿಷಕಾರಿ ಜಂತುಗಳ ಕಾಟ ಹೆಚ್ಚಾಗಿದ್ದು, ಮಲಗಲು, ಅಡುಗೆ ಮಾಡಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಸರ್ಕಾರ ನೀಡುವ ಪಡಿತರದಿಂದ ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಸೂರು ಕಲ್ಪಿಸಿಕೊಟ್ಟು ಉಪಕಾರ ಮಾಡಿ' ಎಂದು ಅಧಿಕಾರಿಗಳಿಗೆ ರಾಮಾಂಜನೇಯ ಮಾಡಿಕೊಳ್ಳುತ್ತಿರುವ ಮನವಿ ಮನ ಕಲಕುತ್ತಿದೆ.

ಬಡವರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಸರ್ಕಾರ ವಸತಿ ಯೋಜನೆಗಳನ್ನು ರೂಪಿಸಿದೆ. ಗ್ರಾಮೀಣ ಪ್ರದೇಶ, ನಗರ ಪ್ರದೇಶಕ್ಕೆ ಪ್ರತ್ಯೇಕ ಅನುದಾನವನ್ನೂ ಮೀಸಲಿಟ್ಟಿದೆ. ಬಜೆಟ್​ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ಪಟ್ಟಣದಲ್ಲಿ ರಾಮಾಂಜ ನೇಯನಂತಹ ವಸತಿ ರಹಿತ ಕಡುಬಡವರಿಗೆ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೂರನ್ನು ಒದಗಿಸಿಕೊಡಿ. ಮನು ಮಹೇಶ್​, ಪುರಸಭೆ ಮಾಜಿ ಸದಸ್ಯ ಪಾವಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net