

ಬೇತಮಂಗಲ: ನ್ಯಾಯಾಲಯದಲ್ಲಿದ್ದ 28 ಗುಂಟೆ ಜಮೀನಿನ ವಿವಾದ ಮಧ್ಯೆ ಗುಡಿಸಿಲು ಹಾಕಿದ್ದರು ಎಂಬ ಕಾರಣಕ್ಕೆ ಮೂವರು ಸಹೋದರರ ಮದ್ಯೆ ಶುರುವಾದ ಹೊಡೆದಾಟದಲ್ಲಿ ಶನಿವಾರ ಒಬ್ಬರು ಮೃತಪಟ್ಟಿದ್ದು, ಇಬ್ಬರು ಸಹೋದರರು ಜೈಲು ಪಾಲಾಗಿದ್ದಾರೆ.
ಕೆಜಿಎಫ್ ತಾಲೂಕು ಎನ್.ಜಿ. ಹುಲ್ಲೂರು ಗ್ರಾಮದ ರಮೇಶ್ ಮೃತ. ಮೃತರ ಸಹೋದರರಾದ ಸಂಪಂಗಿ ಮತ್ತು ಸೀನಪ್ಪ ಬಂಧಿತ ಆರೋಪಿಗಳು.
ಒಟ್ಟು ನಾಲ್ವರು ಅಣ್ಣ&ತಮ್ಮಂದಿರ ಪೈಕಿ ಸೀನಪ್ಪ, ಸಂಪಂಗಿ ಮತ್ತು ರಮೇಶ್ ಎಂಬುವವರ ಮದ್ಯೆ ಶನಿವಾರ ಗಲಾಟೆಯಾಗಿದೆ. ನ್ಯಾಯಾಲಯದಲ್ಲಿ ದಾವೆ ಇದ್ದರೂ ಸಹ ರಮೇಶ್ ಸದರಿ ಆಸ್ತಿಯನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಂಡಿದ್ದನಲ್ಲದೆ ಬ್ಯಾಂಕ್ನಲ್ಲಿ ಸಾಲವನ್ನೂ ಪಡೆದಿದ್ದ ಎನ್ನಲಾಗಿದೆ.
ಈ ಬಗ್ಗೆ ಹಲವು ಬಾರಿ ವಾಗ್ವಾದ ನಡೆದಿತ್ತು. ಈ ಮದ್ಯೆ ಕೆಲವು ದಿನಗಳ ಹಿಂದೆ ವಿವಾದಿತ ಸ್ಥಳದಲ್ಲಿ ಮತ್ತೊಬ್ಬ ವ್ಯಕ್ತಿಗೆ ಗುಡಿಸಿಲು ಹಾಕಿಕೊಂಡು ವ್ಯವಸಾಯ ಮಾಡಿಕೊಳ್ಳಲು ರಮೇಶ್ ಬಾಡಿಗೆಗೆ ನೀಡಿದ್ದ, ಇದನ್ನು ವಿರೋಧಿಸಿದ್ದ ಸೀನಪ್ಪ ಮತ್ತು ಸಂಪಂಗಿ ರಮೇಶ್ ಬಳಿ ತಗಾದೆ ತೆಗೆದಿದ್ದರು. ಅದಕ್ಕೆ ಸಿಟ್ಟಿಗೆದ್ದ ರಮೇಶ್ ತನ್ನ ದ್ವಿಚಕ್ರ ವಾಹನದಲ್ಲಿದ್ದ ಮಚ್ಚು ಎತ್ತಲು ಹೋದಾಗ ಎಲ್ಲಿ ಮಚ್ಚಿನಿಂದ ಹಲ್ಲೆ ಮಾಡುತ್ತಾನೋ ಎಂಬ ಭಯಕ್ಕೆ ಸೀನಪ್ಪ ರಮೇಶನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಪರಿಣಾಮ ರಮೇಶ್ ಸ್ಥಳದಲ್ಲೇ ಪ್ರಾಣ ಚೆಲ್ಲಿದ್ದಾರೆ. ಹಲ್ಲೆಕೋರರಿಬ್ಬರನ್ನೂ ಪೊಲೀಸರು ಬಂಧಿಸಿದ್ದು, ಸ್ಥಳಕ್ಕೆ ಕೆಜಿಎ್ ಜಿಲ್ಲಾ ಎಸ್ಪಿ ಶಾಂತಕುಮಾರ್, ಬೇತಮಂಗಲ ವೃತ್ತ ಇನ್ಸ್ಪೆಕ್ಟರ್ ರಂಗಸ್ವಾಮಯ ಭೇಟಿ ನೀಡಿ ಪರಿಶೀಲಿಸಿದ್ದು, ಬೇತಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.