ಕುಡಿದ ಮತ್ತಿನಲ್ಲಿ ಸಹೋದರನ ಹತ್ಯೆ

Crime Logo
Published on

ಸಕಲೇಶಪುರ: ತಾಲೂಕಿನ ಹಾರ್ಲೆ ಕೂಡಿಗೆ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಸಹೋದರರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಜೋಸೆಫ್ ಮಂತೆರ(34) ಮೃತರು. ಈತನ ಹಿರಿಯ ಸಹೋದರ ಸುನೀಲ್ ಮಂತೆರ ಕೊಲೆ ಆರೋಪಿ. ಗುರುವಾರ ರಾತ್ರಿ ಸಹೋದರರ ನಡುವೆ ಜಗಳ ಆರಂಭವಾಗಿದ್ದು ಜಗಳ ವಿಕೋಪಕ್ಕೆ ತಿರುಗಿ ಅಣ್ಣ ಸುನೀಲ್ ಮೆಂತರ, ಜೋಸೆಫ್ ಮೆಂತರನಿಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಜೋಸೆಫ್ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net