"ಜಮೀನು ವಿವಾದ' ಅಣ್ಣನಿಂದ ತಮ್ಮನ ಹತ್ಯೆ

Published on

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿಯಲ್ಲಿ ಜಮೀನು ವಿವಾದದಲ್ಲಿ ಅಣ್ಣನೇ ತಮ್ಮನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣ ಗುರುವಾರ ತುರುವೇಕೆರೆ ಪಟ್ಟಣದ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

ಬ್ಯಾಲಹಳ್ಳಿಯ ಶ್ರೀನಿವಾಸ್​ (50) ಕೊಲೆಯಾದಾತ. ಶ್ರೀನಿವಾಸ್​ ಅವರ ಅಣ್ಣ ಕೃಷ್ಣಪ್ಪ(65), ಕೃಷ್ಣಪ್ಪನ ಪುತ್ರ ಪ್ರಮೋದ ಕೊಲೆ ಆರೋಪಿಗಳು. ಬ್ಯಾಲಹಳ್ಳಿ ರಾಮಯ್ಯನವರ ಮಕ್ಕಳಾದ ಕೃಷ್ಣಪ್ಪ ಮತ್ತು ಶ್ರೀನಿವಾಸ್​ ನಡುವೆ ಪಿತ್ರಾರ್ಜಿತ ಆಸ್ತಿ ಸಮನಾಗಿ ಹಂಚಿಕೆಯಾಗಿಲ್ಲ ಹಾಗೂ ಜಮೀನಿನ ದಾಖಲೆ ಸರಿಯಾಗಿ ಮಾಡಿಕೊಟ್ಟಿಲ್ಲ ಎಂದು ಗ್ರಾಮದಲ್ಲಿ ಆಗಾಗ ಜಗಳವಾಗುತ್ತಿದ್ದವು. ಆದರೆ ಗುರುವಾರ ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ಶ್ರೀನಿವಾಸ್​ನನ್ನು ದಾರಿ ಮಧ್ಯೆ ತಡೆದ ಕೃಷ್ಣಪ್ಪ ಮತ್ತು ಪ್ರಮೋದ್​ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆ, ಅದು ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಶ್ರೀನಿವಾಸ್​ನನ್ನು ಕೃಷ್ಣಪ್ಪ ಹಾಗೂ ಪ್ರಮೋದ್​ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇನ್ನು ತೋಟದಿಂದ ಮನೆಗೆ ಬಾರದ ಶ್ರೀನಿವಾಸ್​ನನ್ನು ಹುಡುಕಲು ಕುಟುಂಬದವರು ತೋಟಕ್ಕೆ ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ತಿಪಟೂರು ಎಎಸ್​ಪಿ ಯಶುಕುಮಾರ್​ ಶಮಾರ್, ತುರುವೇಕೆರೆ ಸಿಪಿಐ ಲೋಹಿತ್​, ಪಿಎಸ್​ಐ ಮೂರ್ತಿ ಸ್ಥಳ ಪರಿಶೀಲಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net