

ಸಿಂಧನೂರು: ಶ್ರೀ ಗಜಾನನೋತ್ಸವ ಸಮಿತಿಯಿಂದ ಗಣೇಶೋತ್ಸವ ಅಂಗವಾಗಿ ನಡೆಯುವ ಐದು ದಿನದ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ಆಚರಿಸಬೇಕೆಂದು ತಾಲೂಕು ಗಂಜ್ ವರ್ತಕರ ಕಲ್ಯಾಣ ಸಂಘದ ಗೌರವಾಧ್ಯಕ್ಷ ಮಲ್ಲನಗೌಡ ಕಾನಿಹಾಳ ಹೇಳಿದರು.
ನಗರದ ಶ್ರೀ ಗಣೇಶ ದೇವಸ್ಥಾನದಲ್ಲಿ ಶ್ರೀ ಗಜಾನನೋತ್ಸವ ಸಮಿತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಾರ್ಯಕ್ರಮಗಳ ಆಯೋಜನೆ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಗಂಜ್‌ನಲ್ಲಿ ಹಲವಾರು ವರ್ಷಗಳಿಂದ ಗಣೇಶ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಎಲ್ಲರೂ ಸಹೋದರರಂತೆ ಹಬ್ಬ ಆಚರಿಸೋಣ. ಯಾವುದೇ ಅವಘಡಗಳಿಗೆ ಅವಕಾಶ ನೀಡುವುದು ಬೇಡ ಎಂದರು.
ಶ್ರೀ ಗಜಾನನೋತ್ಸವ ಸಮಿತಿ ಅಧ್ಯಕ್ಷ ಸುರೇಶ ಕುರುಕುಂದ ಮಾತನಾಡಿ, ಸೆ.7 ರಂದು ಗಣೇ ಪ್ರತಿಷ್ಠಾಪನೆ, ಸಂಜೆ 6 ಗಂಟೆಗೆ ಸಿದ್ಧಿ ಸಮಾಧಿ ಯೋಗದ ಮಹೇಶ ಗುರೂಜಿ ಅವರಿಂದ ಭಜನಾ ಕಾರ್ಯಕ್ರಮ, ಸೆ.8 ರಂದು ಸಂಜೆ ಸ್ಟೈಲಿಸ್ ಸ್ಟಾರ್ಸ್ ಡ್ಯಾನ್ಸ್ ಅಕಾಡೆಮಿಯ ಬಸವರಾಜ ಕೆ.ಎಸ್. ಅವರಿಂದ ನೃತ್ಯ ಕಾರ್ಯಕ್ರಮ, ಸಿಂಧನೂರು ಹೆಲ್ತ್ ಕ್ಲಬ್‌ನಿಂದ ಕೋಲಾಟ ನಡೆಯಲಿದೆ ಎಂದರು.
ಸೆ.9 ರಂದು ಕೋತಬಾಳ ಅರುಣೋದಯ ಸಾಂಸ್ಕೃತಿಕ ಕಲಾ ತಂಡದಿಂದ ಜಾನಪದ ಸಂಭ್ರಮ, ಸೆ.10 ರಂದು ಸಂಜೆ ಕನ್ನಡ ಕೋಗಿಲೆ ಕರಿಬಸವ ತಡಕಲ್ ಹಾಗೂ ಗಿಚ್ಚಿಗಿಲಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ, ಸೆ.11 ರಂದು ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದೆಂದು ತಿಳಿಸಿದರು.
ಸಮಿತಿ ಕಾರ್ಯದರ್ಶಿ ಲಿಂಗರಾಜ ಹೊಸಳ್ಳಿಕ್ಯಾಂಪ್, ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಫಕೀರಪ್ಪ ತಿಡಿಗೋಳ, ತಾಲೂಕು ಅಧ್ಯಕ್ಷ ದೊಡ್ಡನಗೌಡ ಕಲ್ಲೂರು, ತಾಲೂಕು ಹಾಲುಮತ ಸಮಾಜದ ಉಪಾಧ್ಯಕ್ಷ ಮಲ್ಲಪ್ಪ ಮೈಲಾರ, ಶರಣೇಗೌಡ ಸಾನಬಾಳ, ಶರಣಪ್ಪ ಸೌದ್ರಿ, ಶರಣಪ್ಪ ಜಂಬಲದಿನ್ನಿ, ಬಸವರಾಜ ಮನ್ನಾಪುರ, ನಾಗೇಶ್ವರರಾವ್, ಅಮರೇಶ ಬಾಗೋಡಿ ಇದ್ದರು.