ಕಾರು ಡಿಕ್ಕಿಯಾಗಿ ಅಣ್ಣ-ತಂಗಿ ಸಾವು

A®Ü®ÜA
Published on

 ಕೋಲಾರ :

ತಂಗಿಯನ್ನು ಕಾಲೇಜಿಗೆ ದಾಖಲಿಸಿ ವಾಪಸ್​ ಮನೆಗೆ ಬೈಕ್​ನಲ್ಲಿ ಕರೆದುಕೊಂಡು ಬರುವಾಗ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಅಣ್ಣ&ತಂಗಿ ಮೃತಪಟ್ಟಿದ್ದಾರೆ. ಇದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಕೋಲಾರ ತಾಲೂಕಿನ ಕೊಂಡೇನಹಳ್ಳಿಯ ಯಶಸ್ವಿನಿ ಬಾಯಿ (16) ಹಾಗೂ ಹರ್ಷಿತ್​ ಸಿಂಗ್​ (20) ಮೃತರು.

ಕೋಲಾರ &ಶ್ರೀನಿವಾಸಪುರ ರಸ್ತೆಯಲ್ಲಿರುವ ವೀರಾಪುರ ಗೇಟ್​ ಬಳಿ ಸೋಮವಾರ ಸಂಜೆ ಅಪಘಾತ ಸಂಭವಿಸಿದೆ.

ತಂದೆ&ತಾಯಿ ಕೂಲಿ ನಾಲಿ ಮಾಡಿ ತನ್ನಿಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಮಗಳು ಪಿಯುಸಿಗೆ ದಾಖಲಾಗಿದ್ದರೆ, ಮಗ ಪದವಿ ವ್ಯಾಸಂಗ ಮಾಡುತ್ತಿದ್ದ. ಹರ್ಷಿತ್​ ಕಾಲೇಜು ಮುಗಿಸಿಕೊಂಡು ಯಶಸ್ವಿನಿಯ ಕಾಲೇಜಿಗೆ ಹೋಗಿ ಅಡ್ಮಿಷನ್​ ಮಾಡಿ ವಾಪಸ್​ ಬರುವಾಗ ಈ ದುರ್ಟನೆ ಸಂಭವಿಸಿದೆ.

ನಿತ್ಯ ಇಬ್ಬರೂ ಬಸ್​ನಲ್ಲೇ ಕಾಲೇಜಿಗೆ ತೆರಳುತ್ತಿದ್ದರು. ಆದರೆ ತಂಗಿಯ ಕಾಲೇಜು ದಾಖಲಾತಿಗೆ ಬೇಕಾಗಿದ್ದ ಕೆಲ ದಾಖಲೆಗಳನ್ನು ಮರೆತು ಹೋಗಿದ್ದರಿಂದ ಯಶಸ್ವಿನಿ ಹಾಗೂ ಹರ್ಷಿತ್​ ಮನೆಯಿಂದ ಬೈಕ್​ನಲ್ಲಿ ಹೋಗಿ ದಾಖಲೆ ಕೊಟ್ಟು ವಾಪಸ್​ ಮನೆಗೆ ತೆರಳುವ ವೇಳೆ ಎದುರಿನಿಂದ ಬಂದ ಕಾರಿನ ಚಾರ್ಸಿ ತುಂಡಾಗಿ ಬೈಕ್​ಗೆ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ.

ಡಿಕ್ಕಿ ರಭಸಕ್ಕೆ ಯಶಸ್ವಿನಿ ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಹರ್ಷಿತ್​ ಕೊನೆಯುಸಿರೆಳೆದಿದ್ದಾನೆ. ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಮರಣೋತ್ತರ ಪರೀೆ ನಂತರ ಮೃತದೇಹವನ್ನು ಪಾಲಕರಿಗೆ ಹಸ್ತಾಂತರಿಸಿದ್ದು, ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net