ಅಪಘಾತದಲ್ಲಿ ಅಣ್ಣ&ತಮ್ಮ ಸಾವು

Published on

ಬಂಗಾರಪೇಟೆ: ತಾಲೂಕಿನ ಕೋಲಾರ ಮುಖ್ಯ ರಸ್ತೆಯ ಭಾವರಹಳ್ಳಿ ಗೇಟ್​ ಸಮೀಪ ಭಾನುವಾರ ಬೆಳಗ್ಗೆ ಅಣ್ಣ&ತಮ್ಮ ಬೈಕ್​ನಲ್ಲಿ ಹೊಗುತ್ತಿದ್ದಾಗ ಖಾಸಗಿ ಬಸ್​ ಡಿಕ್ಕಿಯಾಗಿ ತಮ್ಮ ಸ್ಥಳದಲ್ಲೇ ಮೃತಪಟ್ಟರೆ, ಅಣ್ಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಕಾಮಸಮುದ್ರ ಸಮೀಪದ ಭೋಯಿನಹಳ್ಳಿಯ ಅಣ್ಣ ಮದನ್​ (28), ತಮ್ಮ ಉಮೇಶ್​ (26) ಮೃತರು.

ಕಳೆದ ಎರಡು ವರ್ಷದಿಂದ ಎಚ್​.ಕ್ರಾಸ್​ ಬಳಿಯ ಬೇಕರಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಮದನ್​ ನಿತ್ಯ ಬಸ್​ನಲ್ಲಿ ಹೋಗಿ ಬರುತ್ತಿದ್ದರು. ಆದರೆ ಭಾನುವಾರ ಬೈಕ್​ನಲ್ಲಿ ತಮ್ಮನೊಟ್ಟಿಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಖಾಸಗಿ ಬಸ್​ಗೆ ಓವರ್​ಟೇಕ್​ ಮಾಡುವಾಗ ಬಸ್​ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಉಮೇಶ್​ ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡಿದ್ದ ಮದನ್​ನನ್ನು ಸ್ಥಳಿಯರು ಆರ್​.ಎಲ್​.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದರೆ ಮದನ್​ ಆಸ್ಪತ್ರೆಗೆ ಅಸುನೀಗಿದರು.

ಘಟನೆಗೆ ಸಂಬಂಧಿಸಿದಂತೆ ಬಸ್​ ಚಾಲಕ ಕೆಜಿಎ್​ ತಾಲೂಕಿನ ಹೆನ್ರೀಸ್​ ನಿವಾಸಿ ಕಂದಪ್ಪ (52) ಎಂಬಾತನನ್ನು ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದ್ದು, ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೆಜಿಎ್​ ಜಿಲ್ಲಾ ಎಸ್​ಪಿ ಶಿವಾಂಶು ರಜಪೂತ್​, ಡಿವೈಎಸ್ಪಿ ಪಾಂಡುರಂಗ ಅವರು ಘಟನೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net