ಫೋಟೋಗ್ರಫಿ ಸ್ಪರ್ಧೆಯಲ್ಲಿ ಕಂಚಿನ ಪದಕ

26spt7
ಸೋಮವಾರಪೇಟೆಯ ರಮ್ಯ ಸ್ಟುಡಿಯೋ ಮಾಲೀಕ ವಿನೋದ್ ಜಯರಾಂ ರಾಷ್ಟ್ರ ಮಟ್ಟದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದು, ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪದಕ ಸ್ವೀಕರಿಸಿದರು. ಮುರುಳಿ, ಉಮಾಶಂಕರ್, ಸತ್ಯನಾರಾಯಣ, ಮಂಜು ಇದ್ದರು.
Published on

ಸೋಮವಾರಪೇಟೆ: ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದಿಂದ ಈಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ರಮ್ಯ ಸ್ಟುಡಿಯೋ ಮಾಲೀಕ ವಿನೋದ್ ಜಯರಾಂ ಕಂಚಿನ ಪದಕ ಪಡೆದಿದ್ದಾರೆ.

ದೇಶದ ವಿವಿಧ ಭಾಗಗಳಿಂದ 247 ಛಾಯಾಚಿತ್ರಗಾರರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 3046 ಛಾಯಾಚಿತ್ರಗಳು ಸ್ಪರ್ಧೆಯಲ್ಲಿದ್ದವು. ಇದರಲ್ಲಿ ಮದುವೆ ಶಾಸ್ತ್ರ ವಿಭಾಗದ ಸ್ಪರ್ಧೆಯಲ್ಲಿ ವಿನೋದ್ ಜಯರಾಂ ಅವರು ಕಂಚಿನ ಪದಕ ಗಳಿಸಿದರು.

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಕಾರ್ಯದರ್ಶಿಗಳು ಹಾಗೂ ವಿಭಾಗದ ಅಧ್ಯಕ್ಷರಾದ ಎ.ಎಂ.ಮುರುಳಿ, ಕಾರ್ಯದರ್ಶಿ ಬಿ.ಎನ್.ಉಮಾಶಂಕರ್, ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಅಧ್ಯಕ್ಷ ಸಿ.ಆರ್.ಸತ್ಯನಾರಾಯಣ, ಯೂತ್ ಫೋಟೋಗ್ರಫಿ ಸೊಸೈಟಿ ಅಧ್ಯಕ್ಷ ಮಂಜು ವಿಕಾಸ್ ಶಾಸ್ತ್ರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net