ಸಚಿನ್ ಸಿದ್ದಣ್ಣವರ್‌ಗೆ ಕಂಚಿನ ಪದಕ

h26-sachin siddannavar
Published on

ಹುಬ್ಬಳ್ಳಿ: ದೆಹಲಿಯ ಡಾ. ಕರುಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಮಾ. 21ರಿಂದ 27ರವರೆಗೆ ನಡೆಯುತ್ತಿರುವ 2ನೇ ಖೇಲೋ ಇಂಡಿಯಾ ಪ್ಯಾರಾ ಗೇಮ್‌ನ 50 ಮೀಟರ್ ರೈಫಲ್ ಪ್ರೌನ್ ಮಿಕ್ಸ್ ಫೈನಲ್‌ನಲ್ಲಿ ಹುಬ್ಬಳ್ಳಿಯ ಸಚಿನ್ ಸಿದ್ದಣ್ಣವರ್ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದಿದ್ದಾರೆ.

ಒಲಿಂಪಿಕ್‌ನಲ್ಲಿ ಕಂಚಿನ ಪದಕ ಪಡೆದ ಮೋನಾ ಅಗರ್ವಾಲ್ ಚಿನ್ನ, ಬೆಳ್ಳಿ ಪದಕವನ್ನು ಕೇರಳದ ಆನಂದನ್ ಪಡೆದರು.

ಈ ಪ್ಯಾರಾ ಗೇಮ್‌ನಲ್ಲಿ ಕರ್ನಾಟಕದಿಂದ ಐದು ಶೂಟರ್ಸ್‌ಗಳು ಭಾಗವಹಿಸಿದ್ದರು. ರಾಕೇಶ ನಿಡಗುಂದಿ, ಜ್ಯೋತಿ ಸಣ್ಣಕ್ಕಿ, ಶಂಕರಲಿಂಗ ತವಳಿ, ಪಿಸ್ತೂಲು ವಿಭಾಗದಲ್ಲಿ ವೇಣುಗೋಪಾಲ್ ಭಾಗವಹಿಸಿದ್ದರು. ಇದರಲ್ಲಿ ನಾಲ್ಕು ಶೂಟರ್‌ಗಳು ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಿಂದ ತರಬೇತಿ ಪಡೆದಿದ್ದಾರೆ. ಇವರೆಲ್ಲರಿಗೂ ತರಬೇತುದಾರರನ್ನಾಗಿ ಕ್ರೀಡಾ ಇಲಾಖೆಯಿಂದ ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರು ಅವರನ್ನು ನೇಮಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net