ಕರಾಟೆಯಲ್ಲಿ ಆರ್ಯನ್‌ಗೆ ಕಂಚಿನ ಪದಕ

karate
ಪ್ರಶಸ್ತಿ ಸ್ವೀಕರಿಸುತ್ತಿರುವ ಆರ್ಯನ್
Published on

ಕೋಟ: ಬೆಂಗಳೂರಿನ ಕೋರಮಂಗಲದಲ್ಲಿ ಇತ್ತೀಚೆಗೆ ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ 9ರ ವಯೋಮಿತಿಯ 25 ಕೆ.ಜಿ ಕುಮಿಟೆ ವಿಭಾಗದಲ್ಲಿ ಕುಂದಾಪುರ ವಡೇರಹೋಬಳಿಯ ಆರ್ಯನ್ ಕೆ. ಪೂಜಾರಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದಿದ್ದಾರೆ. ಕಿರಣ್ ಹಾಗೂ ಪುಷ್ಪ ದಂಪತಿ ಪುತ್ರನಾಗಿರುವ ಇವರು ವಡೇರಹೋಬಳಿ ಎಚ್.ಎಂ.ಎಂ. ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕುಂದಾಪುರ ಕೆಡಿಎಫ್ ಕರಾಟೆ ತರಬೇತಿ ಸಂಸ್ಥೆಯ ಕಿರಣ್ ಕುಂದಾಪುರ, ಶಿಹಾನ್, ಸಂದೀಪ್ ವಿ.ಕೆ, ಶಿಹಾನ್ ಸಹಿತ ಹಲವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net